ಪುತ್ತೂರು: ಬೆಂಗಳೂರಿನ ದೊಡ್ಡ ಬಳ್ಳಾಪುರದ ಅನಿಬೆಸೆಂಟ್ ತರಬೇತಿ ಭವನದಲ್ಲಿ ಜ.28 ರಿಂದ ಫೆ. 3ರ ತನಕ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಿಮಾಲಯನ್ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ದರ್ಬೆ ಪಾಂಗಾಳಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಶಿಕ್ಷಕಿ ಮೈತ್ರೇಯಿಯವರು ಅತ್ಯುನ್ನತ ಪದವಿಯನ್ನು ಪಡೆದುಕೊಂಡರು.
ಈ ಒಂದು ತರಬೇತಿಯಲ್ಲಿ ಹಲವಾರು ವಿಷಯಗಳನ್ನು ತರಬೇತುದಾರಿಗೆ ಮಂಡನೆ ಗೈದ ಬಳಿಕ, ಈ ಅತ್ಯುನ್ನತ ಪದವಿಯನ್ನು ಗಳಿಸಿರುತ್ತಾರೆ. ರಾಜ್ಯದ ಮುಕ್ತ ಆಯುಕ್ತರು ಪಿ.ಜಿ ಆರ್ ಸಿಂಧ್ಯಾರವರು ಹಾಗೂ ಗೈಡ್ ಆಯುಕ್ತೆ ಶ್ಯಾಮಲಾ ಕೆ. ವಿ.ರವರು ಗೌರವಿಸಿದರು. ಇವರು ವಿಜಯ ಸರ್ವಿಸಸ್ ನ ಮಾಲಕ ಡಿ. ಶ್ಯಾಮ ಮಂಜುನಾಥಪ್ರಸಾದ್ ರವರ ಪತ್ನಿ.