ನಾಳೆ(ಫೆ.7) ದರ್ಬೆತ್ತಡ್ಕ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟನೆ

0

ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಫೆ.7ರಿಂದ 13 ರವರೇಗೆ ನಡೆಯುವ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ಫೆ.7 ರಂದು ದರ್ಬೆತ್ತಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ.

ಬೆಳಿಗ್ಗೆ ಶ್ರಮದಾನದ ಉದ್ಘಾಟನೆಯನ್ನು ದರ್ಬೆತ್ತಡ್ಕ ಒತ್ತೆಕೋಲ ಸಮಿತಿಯ ಅಧ್ಯಕ್ಷ ರವೀಂದ್ರ ಉದ್ಘಾಟಿಸಲಿದ್ದು, ಎಸ್‌ಡಿಎಂಸಿ ಅಧ್ಯಕ್ಷ ಶುಭಕರ ನಾಯಕ್ ಡಿ, ಸದಸ್ಯ ಬಾಬು ಪ್ರಸಾದ್, ಕೃಷಿಕ ವಸಂತ ಮಣಿಯಾಣಿ ಉಪಸ್ಥಿತ ಇರಲಿದ್ದಾರೆ. ಸಂಜೆ ನಡೆಯುವ ಶಿಬಿರದ ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಶಿಬಿರ ಉದ್ಘಾಟನೆ ಮಾಡಲಿದ್ದು ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಸಭಾಧ್ಯಕ್ಷತೆ ವಹಿಸಲಿದ್ದು ಅತಿಥಿಗಳಾಗಿ ಬಿಇಓ ಲೋಕೇಶ್ ಎಸ್.ಆರ್, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ, ದರ್ಬೆತ್ತಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶುಭಕರ ನಾಯಕ್ ಡಿ, ಪ್ರಗತಿಪರ ಕೃಷಿಕ ಜಯರಾಮ ಪೂಜಾರಿ ಕುಕ್ಕುತ್ತಡಿ, ನಿವೃತ್ತ ಸೈನಿಕ ಶೇಸಪ್ಪ ಕುಕ್ಕುತ್ತಡಿ, ದರ್ಬೆತ್ತಡ್ಕ ಶಾಲಾ ಮುಖ್ಯಗುರು ಯು.ಬಿ.ಚರುಂಬ, ಬೆಟ್ಟಂಪಾಡಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ನವೀನ್ ರೈ ಚೆಲ್ಯಡ್ಕ, ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಬಾಲಕೃಷ್ಣ ರೈ ಸೇರ್ತಾಜೆ, ಪತ್ರಕರ್ತ ಸಿಶೇ ಕಜೆಮಾರ್, ನಿವೃತ್ತ ಮುಖ್ಯಗುರು ವಾಸು ಮಣಿಯಾಣಿ ಕುರಿಂಜಮೂಲೆ, ಉದ್ಯಮಿ ರಾಜೇಶ್ ಪಳ್ಳತ್ತಾರು, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ ಸೇರಿದಂತೆ ಹಲವು ಮಂದಿ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ, ಶಿಬಿರದ ಯೋಜನಾಧಿಕಾರಿಗಳಾದ ಡಾ.ಯೋಗೀಶ್ ಎಲ್.ಎನ್, ಡಾ.ಲಾಯ್ಡ್ ವಿಕ್ಕಿ ಡಿ’ಸೋಜಾರವರುಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here