ಪುತ್ತೂರು: ನಮ್ಮ ಶಾಲೆ, ಸ. ಹಿ ಪ್ರಾ. ಶಾಲೆ ಸಾಮೆತ್ತಡ್ಕ ಇದರ ಸ್ಥಾಪಕ ಅಧ್ಯಕ್ಷ ಗೋಪಾಲ ಕೃಷ್ಣ ಭಟ್ ರವರು ಅವರ ಹುಟ್ಟುಹಬ್ಬದ ಶಾಶ್ವತ ನೆನಪಿಗಾಗಿ ಅವರು ಬಳಸುತ್ತಿದ್ದ ನ್ಯಾನೋ ಕಾರ್, ಅಲ್ಮೆರಾ,ನೀರಿನ ಟ್ಯಾಂಕ್,ಕುರ್ಚಿಗಳನ್ನು ಶಾಲೆಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ನಡೆಯಿತು.
ಶಾಲೆಯ ಮುಖ್ಯ ಗುರುಗಳು ಮರಿಯಾ ಅಶ್ರಫ್ ರವರು ಶಾಲೆಯ ಪ್ರಾರಂಭ ಮಾಡಲು ಹಾಗೂ ಅಭಿವೃದ್ಧಿಯನ್ನು ಮಾಡಲು ಅವರು ಪಟ್ಟ ಶ್ರಮ ಮತ್ತು ಸಾಧನೆಯನ್ನು ಸ್ಮರಿಸಿ ಶ್ಲಾಘನೆ ವ್ಯಕ್ತಪಡಿಸಿದರು.
ನಮ್ಮ ಶಾಲೆ ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ಇದರ ನೂತನ ಕಾರ್ಯಾಧ್ಯಕ್ಷ ವೆಂಕಟರಾಜ್ ಸ್ವಾಗತಿಸಿದರು. ಟ್ರಸ್ಟ್ ಕಾರ್ಯದರ್ಶಿ ಇಂದಿವರ್ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರಾದ ಶಿವಪ್ರಸಾದ್ ಕೆಮ್ಮಿಂಜೆ, ವಿದ್ಯಾಭಿಮಾನಿ ದಿನೇಶ್ ಕಾಮತ್,ನಗರಸಭಾ ಸದಸ್ಯರಾದ ಮನೋಹರ್,ಶಿಕ್ಷಣ ಇಲಾಖೆಯ ಪುತ್ತೂರು ಕ್ಲಸ್ಟರ್ CRP ಶಶಿಕಲಾ, SDMC ಉಪಾಧ್ಯಕ್ಷರು, ಸರ್ವ ಸದಸ್ಯರು, ಟ್ರಸ್ಟ್ ನ ಎಲ್ಲಾ ಪ್ರತಿನಿಧಿಗಳು, ಶಿಕ್ಷಕ ವೃಂದದವರು, ಅಕ್ಷರ ದಾಸೋಹ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.