ಮಸೀದಿ ಸಾನಿಧ್ಯ ಅಭಿವೃದ್ಧಿಗೊಂಡಂತೆ ಕುಟುಂಬಗಳು ಪಾವಿತ್ರ್ಯತೆಯನ್ನು ಹೊಂದಲಿ- ಜಲಾಲುದ್ದೀನ್ ತಂಙಳ್
ಪುತ್ತೂರು:ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿಯ ಆವರಣಕ್ಕೆ ದಾನಿಗಳಿಂದ ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ನೂತನವಾಗಿ ಅಳವಡಿಸಿದ ಇಂಟರ್ಲಾಕ್ ಹಾಗೂ ಮೇಲ್ಛಾವಣಿ ಇದರ ಉದ್ಘಾಟನೆ ಸಮಾರಂಭವು ಫೆ.6 ರಂದು ಸಂಜೆ ಸಯ್ಯದ್ ಎನ್.ಪಿ.ಎಂ ಜಲಾಲುದ್ದೀನ್ ತಂಙಳ್ ಅರ್ ಬುಖಾರಿ ಕುನ್ನುಂಗೈ ಕೇರಳ ಇವರ ನೇತೃತ್ವದಲ್ಲಿ ನಡೆಯಿತು.
ಮಸೀದಿ ಸಾನಿಧ್ಯ ಅಭಿವೃದ್ಧಿಗೊಂಡಂತೆ ಕುಟುಂಬಗಳು ಪಾವಿತ್ರ್ಯತೆಯನ್ನು ಹೊಂದಲಿ-ಜಲಾಲುದ್ದೀನ್ ತಂಙಳ್:
ಸಯ್ಯದ್ ಎನ್.ಪಿ.ಎಂ ಜಲಾಲುದ್ದೀನ್ ತಂಙಳ್ ಅರ್ ಬುಖಾರಿ ಕುನ್ನುಂಗೈ ಕೇರಳ ಇವರು ಇಂಟರ್ಲಾಕ್ ಅನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಮೊಟ್ಟೆತ್ತಡ್ಕ ಈ ಪ್ರದೇಶದಲ್ಲಿ ಮಸೀದಿ ನೆಲೆ ನಿಂತದ್ದು ಈ ಭಾಗದ ಜನರಿಗೆ ಬಹಳ ಖುಶಿ ತಂದಿದೆ. ಸಣ್ಣ ಮಸೀದಿಯಿಂದ ಆರಂಭಗೊಂಡ ಇಲ್ಲಿನ ಮಸೀದಿ ವರ್ಷದಿಂದ ವರ್ಷಕ್ಕೆ ಸಮಾನ ಮನಸ್ಕರ ಚಿಂತನೆಯೊಂದಿಗೆ ಅಭಿವೃದ್ಧಿ ಹೊಂದಿ ಇದೀಗ ಹೊಸ ರೂಪ ಪಡೆದಿದೆ. ಭಕ್ತರಿಂದ ಹೇಗೆ ಮಸೀದಿ ಸಾನಿಧ್ಯ ಅಭಿವೃದ್ಧಿಗೊಂಡಂತೆ ನಮ್ಮ ಕುಟುಂಬಗಳೂ ಪಾವಿತ್ರ್ಯತೆಯೊಂದಿಗೆ ಅಭಿವೃದ್ಧಿಗೊಳ್ಳಲಿ ಎಂದರು.
ದಾನಿಗಳ ಸಹಕಾರದಿಂದ ಮಸೀದಿ ಅಭಿವೃದ್ಧಿ-ಅನ್ವರ್ ಸಾದಿಕ್ ಮುಸ್ಲಿಯಾರ್:
ಬದ್ರಿಯಾ ಜುಮ್ಮಾ ಮಸೀದಿ ಮಾಜಿ ಕಾರ್ಯದರ್ಶಿ ಅನ್ವರ್ ಸಾದಿಕ್ ಮುಸ್ಲಿಯಾರ್ ಸ್ವಾಗತಿಸಿ ಮಾತನಾಡಿ, ಮಳೆಗಾಲದಲ್ಲಿ ಮಕ್ಕಳಿಗೆ ಅಲ್ಲದೆ ಎಲ್ಲರಿಗೂ ಕಷ್ಟಕರವಾಗಿದ್ದು ಇದೀಗ ಮೇಲ್ಛಾವಣಿಯ ನಿರ್ಮಾಣ, ಇಂಟರ್ಲಾಕ್ ಅಳವಡಿಕೆಯಿಂದ ಸುಲಭ ಸಾಧ್ಯವಾಗಿದ್ದು ಮಾತ್ರವಲ್ಲ ಸುಂದರವಾಗಿ ಮೂಡಿ ಬಂದಿದೆ. ಮಸೀದಿಯ ಅಭಿವೃದ್ಧಿಗೆ ದಾನಿಗಳು ನಮ್ಮೊಂದಿಗೆ ಸಹಕರಿಸಿದ್ದು ಅಲ್ಲಾಹು ಅವರನ್ನು ಆಶೀರ್ವದಿಸಲಿ ಎಂದರು. ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿ ಖತೀಬರಾದ ಬಶೀರ್ ದಾರಿಮಿ, ಉಮರುಲ್ ಫಾರೂಕ್ ಫೈಯ್ಜಿ, ಅಧ್ಯಕ್ಷ ಅಬ್ದುಲ್ಲ ಕೆ, ಮಾಜಿ ಅಧ್ಯಕ್ಷ ಅಬ್ಬಾಸ್ ನಿರ್ಮಲ್, ಕಾರ್ಯದರ್ಶಿ ಹನೀಫ್, ಕೋಶಾಧಿಕಾರಿ ಹಮೀದ್(ಅಮ್ಮಿ), ಆದಂ ಸೌಹಾರ್ದ ಪಿಕಪ್, ಆದಂ ಝಮ್ ಝಮ್, ಹನೀಫ್ ಕಾಪಿಕಾಡ್, ರಫೀಕ್ ಎಂ.ಕೆ ಮುಕ್ರಂಪಾಡಿ, ಸನ ಇಲೆಕ್ಟ್ರಿಕಲ್ಸ್ ನ ನಿಸಾರ್ ಗೋಲೆಕ್ಸ್, ಇಸ್ಮಾಯಿಲ್, ಇರ್ಫಾನ್, ಯಾಹ್ಯಾ, ಷೆರೀಫ್, ಅಝೀಜ್, ಜಬ್ಬಾರ್, ಉಮ್ಮರ್ ಕಾಪಿಕಾಡ್, ಮಹಮ್ಮದ್ ಬಂಡಾಡಿ, ಝಿಯಾನ್, ಸಾಕೀರ್, ನಿಹಾಲ್, ಸುಲೈಮಾನ್, ಸಾಬಿತ್ ಸಹಿತ ಹಲವರು ಉಪಸ್ಥಿತರಿದ್ದರು. ಮಸೀದಿ ಖತೀಬರಾದ ಅಶ್ರಫ್ ರೆಹಮಾನ್ ಕೃತಜ್ಞತೆ ಸಲ್ಲಿಸಿದರು.