ಪುತ್ತೂರು: ನಮ್ಮ ಸಂಸ್ಕೃತಿ ಸ್ವಚ್ಚ ಸಂಸ್ಕೃತಿ ಅಭಿಯಾನದಲ್ಲಿ ಜ.21 ರಿಂದ 31 ರ ತನಕ ನಡೆದ ಸ್ವಚ್ಛತಾ ಶ್ರಮದಾನ ಅಭಿಯಾನದಲ್ಲಿ ಕೆಯ್ಯೂರು ಗ್ರಾಮ ಪಂಚಾಯತ್ನೊಂದಿಗೆ ಪಾಲ್ಗೊಂಡ ಎಲ್ಲಾ ಸಂಘ ಸಂಸ್ಥೆ ಗಳಿಗೆ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಮತ್ತೆ ಶಿಕ್ಷಕ ವೃಂದ ಹಾಗೇ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲಾ ನಾಗರಿಕರಿಗೆ ಕೆಯ್ಯೂರು ಗ್ರಾಪಂನಿಂದ ಅಭಿನಂದನೆ ಸಲ್ಲಿಸಲಾಯಿತು.
ಕೆಯ್ಯುರು ಗ್ರಾಮ ಪಂಚಾಯತ್ ಸಂಭಾಗಣದಲ್ಲಿ ಫೆ.06 ರಂದು ನಡೆದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಪಡೆ ಸಮಿತಿ ಸಭೆಯಲ್ಲಿ ಈ ಅಭಿನಂದನೆ ಸಲ್ಲಿಸಲಾಯಿತು. ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿ, ಮುಂದೆಯೂ ನಮ್ಮ ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿಸುವಲ್ಲಿ ಪ್ರತಿಯೊಬ್ಬರು ಸಹಕರಿಸುವಂತೆ ಕೇಳಿಕೊಂಡರು.
ಈ ಸಂದರ್ಭದಲ್ಲಿ ಪಂಚಾಯತ್ ಎಲ್ಲಾ ಸದಸ್ಯರುಗಳು, ಎಲ್ಲ ಸಂಘ ಸಂಸ್ಥೆ ಪ್ರತಿನಿದಿಗಳು, ಸಂಜೀವಿನಿ ಒಕ್ಕೂಟ ದ ಪ್ರತಿನಿಧಿಗಳು, ಸದಸ್ಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಎಲ್ಲಾ ಶಾಲಾ ಕಾಲೇಜು ಮುಖ್ಯ ಗುರುಗಳು, ಶಿಕ್ಷಕರು, ವರ್ತಕರು ಹಾಗೇ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.