ಫೆ‌10:ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಪುತ್ತೂರು ಶಾಖೆಯ ಸ್ಥಳಾಂತರ

0

ಪುತ್ತೂರು: ಜಿ.ಎಲ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಈ ವರೆಗೆ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ). ಮಂಗಳೂರು ಇದರ ಪುತ್ತೂರು ಶಾಖೆಯು ಇದೀಗ ನವೀಕರಣಗೊಂಡು ಪುತ್ತೂರಿನ ಕೋರ್ಟ್ ರಸ್ತೆಯ ಶ್ರೀ ಹರಿ ಕಾಂಪ್ಲೆಕ್ಸ್ ನ ನೆಲ ಅಂತಸ್ತಿಗೆ ಫೆ.10 ರಂದು ಸ್ಥಳಾಂತರಗೊಳ್ಳುತ್ತಿದೆ.


ಸೋಮವಾರ ಮಧ್ಯಾಹ್ನ 12:35 ಗಂಟೆಗೆ ಸಹಕಾರಿಯ ನಿರ್ದೇಶಕರಾದ ಅಶೋಕ್ ಶೆಣೈ ಭಾಮಿರವರು ಉದ್ಘಾಟಿಸಲಿದ್ದಾರೆ. ಈ‌ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷರು ಹಾಗೂ ಇತರ ನಿರ್ದೇಶಕರು ಉಪಸ್ಥಿತರಿರುವರು. ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ಜೆರಾಕ್ಸ್ ಮತ್ತು ಪ್ರಿಂಟಿಂಗ್ ಸೇವೆಗಳನ್ನು ಹೊಸ ನಿವೇಶನದಲ್ಲಿ ಪ್ರಾರಂಭಿಸಲಾಗುತ್ತಿದೆ. ಆಕರ್ಷಕ‌ ಠೇವಣಿ ಯೋಜನೆಗಳು ಹಾಗೂ ಕಡಿಮೆ ಬಡ್ಡಿದರದಲ್ಲಿ ಚಿನ್ನಾಭರಣ ಸಾಲ ಸಹಿತ ಇತರ ಸಾಲಗಳ ಸೌಲಭ್ಯಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here