ಪುತ್ತೂರು: ಶಾಂತಿಗೋಡು ಗ್ರಾಮದ ಕೈಂದಾಡಿ ಶಿರಾಡಿ ದೈವಸ್ಥಾನದಲ್ಲಿ ಫೆ.12ರಂದು ಶಿರಾಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
ಫೆ.10ರಂದು ಶ್ರೀಶಾಸ್ತಾವು ದೇವಸ್ಥಾನದಲ್ಲಿ ರಂಗಪೂಜೆ, ಫೆ.11ರಂದು ರಾತ್ರಿ ಸರೋಳಿಯಿಂದ ಕಲ್ಕುಡ ಕಲ್ಲುರ್ಟಿ ದೈವಗಳ ಭಂಡಾರ ಬರುವುದು, ಶಿರಾಡಿ ದೈವದ ಭಂಡಾರ ತೆಗೆಯುವುದು, ಫೆ.12ರಂದು ಬೆಳಿಗ್ಗೆ ದೈವಗಳ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಶಾಂತಿಗೋಡು ದೊಡ್ಡಮನೆಯಿಂದ ಮಾರಿ ಹೊರಡುವುದು ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.