ಪುತ್ತೂರು: ಮಾಡನ್ನೂರ್ ಎಸ್ ಕೆ ಎಸ್ ಎಸ್ ಎಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವತಿಯಿಂದ ಪರ್ಪುಂಜದಿಂದ ಕುಂಬ್ರ ಜಂಕ್ಷನ್ ತನಕ ನಡೆದ ಮಾನವ ಸರಪಳಿ ಮತ್ತು ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಕಾರ್ಯಕ್ರಮದಲ್ಲಿ ನೂರಾರು ಮದ್ರಸಗಳಿಂದ ಹಾಗೂ ಮೊಹಲ್ಲಾಗಳಿಂದ ಭಾಗವಹಿಸಿ ನಡೆದ ರ‍್ಯಾಲಿಯಲ್ಲಿ ಮಾಡನ್ನೂರು ನೂರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳ ಸ್ಕೌಟ್ಸ್, ದಫ್ ಮತ್ತು ಫ್ಲವರ್ ಶೋ ಉತ್ತಮ ಹಾಗೂ ಆಕರ್ಷಕ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದಿದೆ.
![](https://puttur.suddinews.com/wp-content/uploads/2025/02/7b28eefb-aed4-42ed-bc5d-2157c1687a82.jpg)
ಬಹುಮಾನವು 3000/ ಕ್ಯಾಶ್ ಅವಾರ್ಡ್ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ.ಮಾಡನ್ನೂರು ನೂರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಾಗೂ ರಾಜ್ಯ ಅಂತರ್ ರಾಜ್ಯ ಮಟ್ಟದಲ್ಲಿ ನಡೆದ ಮುಸಾಬಕ,ಹಾಗೂ ಸರ್ಗಾಲಯ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಥಮ, ಸಹಿತ ವಿವಿಧ ಬಹುಮಾನ, ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮದ್ರಸ ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಯ ಹಿಂದೆ ಮಾಡನ್ನೂರು ನೂರುಲ್ ಇಸ್ಲಾಂ ಮದ್ರಸ ಅಧ್ಯಾಪಕರ,ಜಮಾಅತ್ ಕಮಿಟಿ ಪದಾಧಿಕಾರಿಗಳ, ಮಕ್ಕಳ ಪೋಷಕರ,ರಕ್ಷಕರ ಅಪಾರ ಶ್ರಮವಿದೆ. ಪ್ರಥಮ ಸ್ಥಾನ ಪಡೆದ ಹಣದ ಮೊತ್ತ ಹಾಗೂ ಪ್ರಶಸ್ತಿ ಫಲಕವನ್ನು ಎಸ್ ಕೆ ಎಸ್ ಎಸ್ ಎಫ್ ನಾಯಕರು ಜಮಾಅತ್ ಕಮಿಟಿಗೆ ನೀಡಿದರು.
ಇದನ್ನು ಜುಮುಅಃ ನಮಾಝ್ ನಂತರ ಮಾಡನ್ನೂರು ಜಮಾಅತ್ ಕಮಿಟಿ ಅಧ್ಯಕ್ಷ ಬುಶ್ರ ಅಬ್ದುಲ್ ಅಝೀಝ್ ಕಾರ್ಯದರ್ಶಿ BM ಅಬ್ದುಲ್ಲಾ. ಖತೀಬ್ ಉಸ್ತಾದ್ SB ದಾರಿಮಿ ಇವರ ನೇತ್ರತ್ವದಲ್ಲಿ ಮದ್ರಸಾ ಉಸ್ತಾದರುಗಳಿಗೆ ಹಸ್ತಾಂತರಿಸಿದರು. ಹಲವಾರು ಗಣ್ಯವ್ಯಕ್ತಿಗಳು, ಕಮಿಟಿ ಪದಾಧಿಕಾರಿಗಳು, ಮದ್ರಸ ಉಸ್ತುವಾರಿಗಳು, ಜಮಾಅತಿನ ಪ್ರಮುಖರು, ಭಾಗವಹಿಸಿದರು.