ಪುತ್ತೂರು: ಕೆದಂಬಾಡಿ ಗ್ರಾಮದ ಇದ್ಪಾಡಿ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಫೆ.11 ರಂದು ನಡೆಯುವ ವಾರ್ಷಿಕ ಮಾರಿ ನೇಮೋತ್ಸವದ ಪ್ರಯುಕ್ತ ಇದ್ಪಾಡಿ ಶ್ರೀ ಶಿರಾಡಿ ಭಕ್ತವೃಂದ ಇವರ ಪ್ರಾಯೋಜಕತ್ವದಲ್ಲಿ ಊರಿನವರ ಸಹಕಾರದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ಶಿರಾಡಿ ದೈವ ರಂಗ ಮಂಟಪದಲ್ಲಿ ರಾತ್ರಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಬೃಂದಾವನ ನಾಟ್ಯಾಲಯ ಕುಂಬ್ರ ಇವರಿಂದ ನೃತ್ಯ ವೈಭವ ಹಾಗೇ ರಾತ್ರಿ 9.30 ರಿಂದ ಬಂಗಾರ್ ಕಲಾವಿದೆರ್ ಪುತ್ತೂರು ಅಭಿನಯಿಸುವ ‘ಮನಸ್ ಎನ್ನಿಲೆಕ’ ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಭಕ್ತಾಧಿಗಳು, ನಾಟಕ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಶಿರಾಡಿ ಭಕ್ತವೃಂದದ ಪ್ರಕಟಣೆ ತಿಳಿಸಿದೆ.