ಪುತ್ತೂರು: ಕೊರಿಂಜ ಶ್ರೀಪಂಚಲಿಂಗೇಶ್ವರ ದೇವಸ್ಥಾನ ಬೆಳ್ತಂಗಡಿ ಇದರ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಉಪ್ಪಿನಂಗಡಿಯ ಸುಸ್ವರ ಮೆಲೋಡೀಸ್ ತಂಡದಿಂದ ಭಕ್ತಿಭಾವಗಾನ ಸಂಭ್ರಮ ನಡೆಯಿತು.
ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು ಸಾರಥ್ಯದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವೈಶಾಲಿ ಎಂ.ಕುಂದರ್, ರಂಗಯ್ಯ ಬಲ್ಲಾಳ್, ರಘುರಾಮ ಶಾಂತಿನಗರ, ಪ್ರಕೃತಿ ಅನಂತಾಡಿ, ಸ್ವಪ್ನಾ ಉಪ್ಪಿನಂಗಡಿರವರುಗಳು ಕಲಾವಿದರಾಗಿ ಭಾಗವಹಿಸಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ಯೋಗೀಶ್ ಕುಮಾರ್ ಕರ್ತಿಲ ಕೊರಿಂಜ, ಸೀತಾರಾಮ ಆಳ್ವ ಕೊರಿಂಜರವರು ಶ್ರೀಕ್ಷೇತ್ರದ ಪ್ರಸಾದ ನೀಡಿ ಕಲಾವಿದರನ್ನು ಸತ್ಕರಿಸಿದರು.