ಬೆಳ್ಳಿಹಬ್ಬದ ಸಂಭ್ರಮದಲ್ಲಿ ಪುರುಷರಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷರಾಗಿ ಉಮೇಶ್ ಇಂದಿರಾನಗರ, ಪ್ರ.ಕಾರ್ಯದರ್ಶಿಯಾಗಿ ಶರತ್‌ಚಂದ್ರ ಬೈಪಡಿತ್ತಾಯ, ಕೋಶಾಧಿಕಾರಿ ವಿಶ್ವನಾಥ ಬಲ್ಯಾಯ

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುರುಷರಕಟ್ಟೆ ಇದರ ಆಶ್ರಯದಲ್ಲಿ ನಡೆಯುವ 25ನೇ ವರ್ಷದ ಗಣೇಶೋತ್ಸವದ ಪೂರ್ವಭಾವಿ ಸಭೆ ಪುರುಷರಕಟ್ಟೆ ಸಿ.ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷ ರವಿ ಮಾಯಂಗಳ ಅಧ್ಯಕ್ಷತೆ ವಹಿಸಿದ್ದರು. ಗಣೇಶೋತ್ಸವವು ಈ ವರ್ಷ 25ನೇ ವರ್ಷದ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದು ಇದನ್ನು ವಿಜ್ರಂಭಣೆಯಿಂದ ಆಚರಿಸುವ ಬಗ್ಗೆ ತೀರ್ಮಾನಿಸಿ ಬೆಳ್ಳಿಹಬ್ಬ ಸಮಿತಿಯನ್ನು ರಚಿಸಲಾಯಿತು.

ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷರಾಗಿ ಉಮೇಶ್ ಎಂ ಇಂದಿರಾನಗರ, ಪ್ರಧಾನ ಕಾರ್ಯದರ್ಶಿಯಾಗಿ ಶರತ್‌ಚಂದ್ರ ಬೈಪಡಿತ್ತಾಯ ಹಾಗೂ ಕೋಶಾಧಿಕಾರಿಯಾಗಿ ವಿಶ್ವನಾಥ್ ಬಲ್ಯಾಯ ಮುಂಡೋಡಿ ಅವರು ಆಯ್ಕೆಯಾಗಿದ್ದಾರೆ.

ಗೌರವಧ್ಯಕ್ಷರಾಗಿ ರವೀಂದ್ರ ರೈ ನೆಕ್ಕಿಲು, ವಸಂತ ಪೂಜಾರಿ ಕಲ್ಲರ್ಪೆ, ವಿಶ್ವನಾಥ್ ಪುರುಷ ಎಂ ಪುರುಷರಕಟ್ಟೆ, ಸಂಚಾಲಕರಾಗಿ ಸತೀಶ್ ಜೋಗಿ ಇಂದಿರಾನಗರ, ಉಪಾಧ್ಯಕ್ಷರಾಗಿ ನವೀನ್ ಪ್ರಭು ಉದಯಭಾಗ್ಯ ಪುರುಷರಕಟ್ಟೆ, ರವಿ ಕೊಡಿಮಜಲು, ಜತೆ ಕಾರ್ಯದರ್ಶಿಯಾಗಿ ರೋಹಿತ್ ಕೋಟ್ಯಾನ್ ಶಿಬರ, ಸತೀಶ್ ಪಿ ಪುರುಷರಕಟ್ಟೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು. ಬಿ.ಕೆ ಶ್ರೀನಿವಾಸ್ ರಾವ್ ಪುರುಷರಕಟ್ಟೆ ಸ್ಥಾಪಕಾಧ್ಯಕ್ಷರಾಗಿದ್ದಾರೆ.


ಸಮಿತಿ ಸದಸ್ಯರುಗಳಾಗಿ ಸುಬ್ರಹ್ಮಣ್ಯ ಪೂಜಾರಿ ಪುರುಷರಕಟ್ಟೆ, ಲಕ್ಷೀಶ ಭಂಡಾರಿ ಇಂದಿರಾನಗರ, ಚಿದಾನಂದ ಎಂ, ದಿನೇಶ್ ಪೂಜಾರಿ, ಕಾರ್ತಿಕ್ ಪೂಜಾರಿ ಇಂದಿರಾನಗರ, ಸಂತೋಷ್ ಪೂಜಾರಿ ಇಂದಿರಾನಗರ, ಚಂದ್ರಕಾಂತ ಜೋಗಿ ಇಂದಿರಾನಗರ, ಹರೀಶ್ ದೇವಾಡಿಗ, ಕೃಷ್ಣಪ್ಪ ಶೆಟ್ಟಿ ಮಜಲು, ಆನಂದ ಕೊಡಿಮಜಲು, ರಾಜು ಕೊಡಿಮಜಲು, ಕಿಶನ್ ಸವಣೂರು, ಅನಿಲ್ ಪ್ರಭು, ದೇವಿ ಪ್ರಸಾದ್ ಪ್ರಭು, ಕಿರಣ್ ಪ್ರಭು, ಪ್ರಕಾಶ್ ಶಿಬರ, ಬಾಲಕೃಷ್ಣ ಮುಂಡೋಡಿ, ದೇವರಾಜ್ ಕಲ್ಕರು, ಗಣೇಶ್ ಆಗ್ರೋ, ನವೀನ್ ಪೂಜಾರಿ ಸೆರಾಜೆ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ತೆರವಾಗಿದ್ದ ಕೋಶಾಧಿಕಾರಿ ಸ್ಥಾನಕ್ಕೆ ರಾಘವೇಂದ್ರ ಪ್ರಭು ಚಂದ್ರಮ್ ಸಾಗ್ ಅವರನ್ನು ಆಯ್ಕೆ ಮಾಡಲಾಯಿತು. 3 ದಿವಸ ಆಚರಿಸುತಿದ್ದ ಗಣೇಶೋತ್ಸವವನ್ನು ಬೆಳ್ಳಿ ಹಬ್ಬದ ಪ್ರಯುಕ್ತ ೪ ದಿವಸ ಆಚರಿಸುವುದಾಗಿ ಹಾಗೂ ಮೂಡಪ್ಪ ಸೇವೆ ಮಾಡುವುದಾಗಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ರವಿ ಮಾಯಂಗಳ ಕಳೆದ ವರ್ಷದ ಲೆಕ್ಕ ಪತ್ರ ಮಂಡಿಸಿ ಮಾತನಾಡಿ ಈ ವರ್ಷದ ಗಣೇಶೋತ್ಸವ 25 ನೇ ವರ್ಷ ಬೆಳ್ಳಿ ಹಬ್ಬ ಆಚರಿಸುತ್ತಿದ್ದು ಎಲ್ಲರನ್ನು ಸೇರಿಸಿಕೊಂಡು ವಿಜ್ರಂಭಣೆಯಿಂದ ಆಚರಿಸಲು ಎಲ್ಲರ ಸಹಕಾರ ಬಯಸಿದರು. ಕಾರ್ಯದರ್ಶಿ ಸಂತೋಷ್ ಜೋಗಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here