ಮ್ಯಾರಥಾನ್ ಓಟ: ರಾಮಕುಂಜ ಆ.ಮಾ.ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

0

ರಾಮಕುಂಜ: ಸುಳ್ಯ ತಾಲೂಕಿನ ಬೆಳ್ಳಾರೆ ಪೆರುವಾಜೆಯಲ್ಲಿ ಭಾವೈಕ್ಯ ಯುವಕ ಮಂಡಲದ ವತಿಯಿಂದ ನಡೆದ 17ರ ವಯೋಮಾನದ ಒಳಗಿನ ಹಾಗೂ 14ರ ವಯೋಮಾನದ ಒಳಗಿನ ಬಾಲಕ/ಬಾಲಕಿಯರ 5 ಕಿ.ಮೀ ಹಾಗೂ 3 ಕಿ.ಮೀ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.


14ರ ವಯೋಮಾನದ ಒಳಗಿನ ಬಾಲಕರ ವಿಭಾಗದಲ್ಲಿ ೬ನೇ ತರಗತಿಯ ಮೋಕ್ಷಿತ್ ದ್ವಿತೀಯ ಹಾಗೂ ಸಿಬಿಎಸ್‌ಇ ೫ನೇ ತರಗತಿಯ ಪೂರ್ಣೇಶ್ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ೧೭ರ ವಯೋಮಾನದ ಒಳಗಿನ ಬಾಲಕರ ವಿಭಾಗದಲ್ಲಿ ೧೦ನೇ ತರಗತಿಯ ಭರತ್ ಕುಮಾರ್ ದ್ವಿತೀಯ, ೯ನೇ ತರಗತಿಯ ರೋಹನ್ ತೃತೀಯ, ೯ನೇ ತರಗತಿಯ ಆಕಾಶ್ ಗೌಡ ನಾಲ್ಕನೇ ಸ್ಥಾನ ಹಾಗೂ ೮ನೇ ತರಗತಿಯ ಯಶಸ್ಸ್ ೧೦ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರೇಮ ಬಿ, ರಾಘವ, ದಿವ್ಯ ಪಿ.ಎನ್.ಹಾಗೂ ಕಿಶನ್‌ರವರು ತರಬೇತಿ ನೀಡಿದ್ದರು. ಸಂಸ್ಥೆಯ ಮುಖ್ಯಗುರುಗಳು, ಆಡಳಿತಾಧಿಕಾರಿಗಳು, ವ್ಯವಸ್ಥಾಪಕರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here