ರೋಮಾಂಚಕ ಕಾರ್ ರೇಸ್ | 6 ಮಹಿಳೆಯರ ಸಹಿತ 109ಮಂದಿ ಭಾಗಿ
ರಾಮಕುಂಜ: ದ.ಕ. ಜಿಲ್ಲೆಯ ಮಟ್ಟಿಗೆ ಅಪರೂಪದ ಸಾಹಸ ಕ್ರೀಡೆ 1 ದಿನದ ಕಾರ್ ರೇಸ್ ಕಾರ‍್ಯಕ್ರಮ ಆತೂರು ಪಾರ್ಟಿ ಆಂಡ್ ಎನ್ಟಟೈರ‍್ಮೆಂಟ್ ಸರ್ವೀಸ್ ಸಂಸ್ಥೆಯ ಆಶ್ರಯದಲ್ಲಿ ಅನ್ವರ್ ಆತೂರು ಮತ್ತು ನಝೀರ್ ಆತೂರು ಸಾರಥ್ಯದಲ್ಲಿ ಫೆ.9ರಂದು ಆತೂರುನಲ್ಲಿ ನಡೆಯಿತು.
ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಜಿಲ್ಲೆಯಾದ್ಯಂತದಿಂದ ತಮ್ಮ ಆಕರ್ಷಕವಾಗಿ ವಿನ್ಯಾಸಗೊಳಿಸಿದ ಕಾರುಗಳೊಂದಿಗೆ ಆಗಮಿಸಿದ್ದ ಸ್ಪರ್ಧಾಳುಗಳು ಆಕರ್ಷಕ ರೀತಿಯಲ್ಲಿ, ರೋಮಾಂಚಕವಾಗಿ ಕಾರು ಚಲಾಯಿಸಿ ನೋಡುಗರ ಕಣ್ತುಂಬಿಸಿದರು. ಬೆಳಿಗ್ಗಿನಿಂದ ಸಂಜೆ ಹೊತ್ತು ಮುಳುಗುವ ತನಕ ನಡೆದ ಈ ಸಾಹಸ ಕ್ರೀಡೆಯನ್ನು ಸಾವಿರಾರು ಮಂದಿ ನೋಡಿ ಖುಷಿ, ಆನಂದದೊಂದಿಗೆ ಮನೋರಂಜನೆಯನ್ನು ಪಡೆದರು.
ಸ್ಪರ್ಧೆಯಲ್ಲಿ ಒಟ್ಟು 14 ವಿಭಾಗಗಳಲ್ಲಿ 109 ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ 6 ಮಂದಿ ಮಹಿಳಾ ಸ್ಪರ್ಧಿಗಳು ಇದ್ದು, ಆಕರ್ಷಕ ಕಾರು ಚಲಾವಣೆಯೊಂದಿಗೆ ಎಲ್ಲರ ಗಮನ ಸೆಳೆದರು.
ವಿಜೇತರ ವಿವರ:
೧೬೦೦ ಸಿಸಿ.: ಜೀಸಂ ಚಿಕ್ಕಮಗಳೂರು (ಪ್ರಥಮ), ಅಝೀಂ ಹಂಚಿ ಗೋವಾ (ದ್ವಿತೀಯ). ೧೪೦೦ ಸಿಸಿ.: ಜೀಸಂ ಚಿಕ್ಕಮಗಳೂರು (ಪ್ರಥಮ), ಪ್ರಕಾಶ್ ಮೂಡಿಗೆರೆ (ದ್ವಿತೀಯ). ಇಂಡಿಯನ್ ಓಪನ್: ಜೀಸಂ (ಪ್ರಥಮ), ನಸೀಬ್ ಆತೂರು (ದ್ವಿತೀಯ). ಸ್ಟಾಕ್ ಕ್ಲಾಸ್: ಅಶ್ರಫಿ ಗಾಯಕ್‌ವಾಡ್ ಗೋವಾ (ಪ್ರಥಮ). ೧೧೦೦ ಸಿಸಿ.: ಸೂರಜ್ ಮಂದಣ್ಣ ಮಡಿಕೇರಿ (ಪ್ರಥಮ), ಪ್ರಕಾಶ್ ಮೂಡಿಗೆರೆ (ದ್ವಿತೀಯ). ೮೦೦ ಸಿಸಿ.: ಸೂರಜ್ ಮಡಿಕೇರಿ (ಪ್ರಥಮ), ವಿವೇಕ್ ಮೂಡಿಗೆರೆ (ದ್ವಿತೀಯ). ನೋವಿಯಸ್ ಅಪ್‌ಟು ೧೧೦೦ ಸಿಸಿ.: ಫೈಝಲ್ ಅಹಮದ್ ಮೂಡಬಿದ್ರೆ (ಪ್ರಥಮ), ನಸೀಬ್ ಆತೂರು (ದ್ವಿತೀಯ). ನೋವಿಯಸ್ ಓಪನ್: ಅಲ್ವಿನ್ ಮೂಡಿಗೆರೆ (ಪ್ರಥಮ), ಎಂ. ಸಿರಾಜುದ್ದೀನ್ ಮೂಡಿಗೆರೆ (ದ್ವಿತೀಯ). ಡಿ.ಕೆ. ಓಪನ್: ನಸೀಬ್ ಆತೂರು (ಪ್ರಥಮ), ಪವನ್ ಮೂಡಬಿದ್ರೆ (ದ್ವಿತೀಯ). ಡಿಸೇಲ್ ಓಪನ್: ಫಝೀಲ್ ಅಹಮದ್ ಮೂಡಬಿದ್ರೆ (ಪ್ರಥಮ), ಅರ‍್ಬಝ್ ಖಾನ್ ಮೂಡಿಗೆರೆ (ದ್ವಿತೀಯ). ಟೀಮ್ ಡೈನಮಿಕ್: ಜೀಸಂ ಚಿಕ್ಕಮಗಳೂರು (ಪ್ರಥಮ), ಸೂರಜ್ ಮಂದಣ್ಣ ಮಡಿಕೇರಿ (ದ್ವಿತೀಯ).
ಜೀಪ್ ೪+೪: ಅಭಿಷೇಕ್ ಬೋರ್ಕರ್ ಪುತ್ತೂರು (ಪ್ರಥಮ), ಮನೀಶ್ ಪುತ್ತೂರು (ದ್ವಿತೀಯ). ಟೀಮ್ ಡೈನಮಿಕ್: ಜಸೀನ ಚಿಕ್ಕಮಗಳೂರು (ಪ್ರಥಮ), ಸೂರಜ್ ಮಂದಣ್ಣ ಮಡಿಕೇರಿ (ದ್ವಿತೀಯ). ಮಹಿಳಾವಿಭಾಗ: ಅಶ್ರಫಿ ಗಾಯಕ್‌ವಾಡ್ ಗೋವಾ (ಪ್ರಥಮ), ಸಂಜನಾ ಬೆಳಗಾವಿ (ದ್ವಿತೀಯ) ವಿಜೇತರಾದರು.
ಉದ್ಘಾಟನಾ ಸಮಾರಂಭ:
ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ ಸಾಹಸ ಕ್ರೀಡೆ ಆಯೋಜಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಆರ್ಯಾಪು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ, ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್, ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ಬದ್ರಿಯಾ ಸ್ಕೂಲ್ ಸಂಚಾಲಕ ಆದಂ ಪಿಲಿಕೂಡೇಲು, ಆತೂರು ಮುಹಿಯುದ್ದೀನ್ ಮಸೀದಿ ಅಧ್ಯಕ್ಷ ಹೈದರ್ ಕಲಾಯಿ, ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಫಲೂಲುದ್ದೀನ್ ಹೇಂತಾರು, ರಾಮಕುಂಜ ಗ್ರಾಮ ಪಂಚಾಯಿತಿ ಸದಸ್ಯ ಯತೀಶ್ ಬಾನಡ್ಕ, ಉದ್ಯಮಿಗಳಾದ ಜಿ. ಮಹಮ್ಮದ್ ರಫೀಕ್, ಟಿ.ಡಿ. ನೌಫಲ್ ಕೊಯಿಲ, ದೇವಿಪ್ರಸಾದ್ ನೀರಾಜೆ, ಕೌಶಿಕ್ ಶೆಟ್ಟಿ ಬೆಳುವಾಯಿ, ಸಮದ್ ಸೋಂಪಾಡಿ, ಸಿರಾಜುದ್ದೀನ್ ಷಾ, ಸಲೀಂ, ನವಾಝ್, ಅಬೂಬಕ್ಕರ್ ಶಫೀಕ್ ಕೊಯಿಲ ಉಪಸ್ಥಿತರಿದ್ದರು.
ಸಂಘಟಕ ಆತೂರು ಪಾರ್ಟಿ ಆಂಡ್ ಎನ್ಟಟೈರ‍್ಮೆಂಟ್ ಸರ್ವೀಸ್ ಸಂಸ್ಥೆಯ ನಝೀರ್ ಆತೂರು ಸ್ವಾಗತಿಸಿ, ನಝೀರ್ ಕೊಯಿಲ ವಂದಿಸಿದರು. ರಫೀಕ್ ಗೋಳಿತ್ತಡಿ, ಅಜೀಜ್ ಅಮೈ ಕಾರ‍್ಯಕ್ರಮ ನಿರೂಪಿಸಿದರು.