ನೆಲ್ಯಾಡಿ: ಜೀರ್ಣೋದ್ದಾರಗೊಂಡಿರುವ ಕಡಬ ತಾಲೂಕಿನ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.೧೦ರಂದು ಬೆಳಿಗ್ಗೆ ೮.೪೮ರಿಂದ ೯.೩೨ರ ಶುಭಲಗ್ನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವರ ಪುನರ್ ಪ್ರತಿಷ್ಠೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು.
![](https://puttur.suddinews.com/wp-content/uploads/2025/02/thirle-4-3.jpg)
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಅಲ್ಪಪ್ರಾಸಾದ ಶುದ್ಧಿ, ನಾಂದಿ ಪುಣ್ಯಾಹ, ರತ್ನ ನ್ಯಾಸಾಧಿಪೀಠ ಪ್ರತಿಷ್ಠೆ, ಶಯ್ಯಾ ಮಂಟಪದಿಂದ ಜೀವ ಕಲಶಾದಿಗಳನ್ನು ಗರ್ಭಗೃಹದ ಒಳಗೆ ಒಯ್ದು ಶ್ರೀ ದೇವರ ಪುನರ್ ಪ್ರತಿಷ್ಠೆ ನಡೆಯಿತು. ಬಳಿಕ ಅಷ್ಟಬಂಧ ಬ್ರಹ್ಮಕಲಶೋತ್ಸವ, ಅಷ್ಟಬಂಧ ಕ್ರಿಯೆ, ಜೀವ ಕಲಶಾಭಿಷೇಕ, ಪ್ರತಿಷ್ಠಾಪೂಜೆ, ಶಿಖರ ಪ್ರತಿಷ್ಠೆ ನಡೆಯಿತು. ನಂತರ ಶ್ರೀ ಕೊಣಾಲು ದೈವದ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಸೇವೆ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಮಧ್ಯಾಹ್ನ ಬ್ರಾಹ್ಮಣರಾಧನೆ, ಪ್ರತಿಷ್ಠಾ ಬಲಿ, ಮಹಾಪೂಜೆ, ಕ್ಷೇತ್ರದ ಮುಂದಿನ ನಿತ್ಯ ನೈಮಿತ್ತಿಕ ನಿಶ್ಚಯಿಸಿ ಪ್ರಾರ್ಥನೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಗೌರಮ್ಮ ಶಬರಾಯ ಸಭಾಭವನದ ಎಲಿಕ್ಕಳ ಕೃಷ್ಣ ಶಬರಾಯ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ, ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕೆ.ಶಿವಾನಂದ ಕಾರಂತ ಕಾಂಚನ, ಪ್ರಧಾನ ಕಾರ್ಯದರ್ಶಿ ಅಜಯ್ರಾಜ್ ಸರಳಾಯ, ಕೋಶಾಧಿಕಾರಿ ಅರುಣ್ರಾಜ್ ಸರಳಾಯ, ಜೊತೆ ಕಾರ್ಯದರ್ಶಿಗಳಾದ ಲೋಕೇಶ್ ಅಗರ್ತ, ಜಯಂತ ಅಂಬರ್ಜೆ, ಸಹ ಕೋಶಾಧಿಕಾರಿಗಳಾದ ಹರೀಶ್ ಶೆಟ್ಟಿ ಪಾತೃಮಾಡಿ, ಭೀಮ ಭಟ್ ನೆಕ್ಕರೆ, ಸದಾನಂದ ಗೌಡ ಡೆಬ್ಬೇಲಿ, ಬಾಲಕೃಷ್ಣ ಶೆಟ್ಟಿ ಅಗರ್ತ, ನೋಣಯ್ಯ ಗೌಡ ಡೆಬ್ಬೇಲಿ, ನೋಣಯ್ಯ ಪೂಜಾರಿ ಅಂಬರ್ಜೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಜಿತ್ಕುಮಾರ್ ಪಾಲೇರಿ, ಪ್ರಧಾನ ಸಂಚಾಲಕ ಸತೀಶ್ ಕೆ.ಎಸ್.ದುರ್ಗಾಶ್ರೀ ನೆಲ್ಯಾಡಿ, ಉಪಾಧ್ಯಕ್ಷರಾದ ಸುಂದರ ಶೆಟ್ಟಿ ಪರು, ಸತೀಶ್ ರೈ ಕೊಣಾಲುಗುತ್ತು, ಪ್ರವೀಣ್ ಭಂಡಾರಿ ಪುರ, ಕುಮಾರನ್ ಪಾಂಡಿಬೆಟ್ಟು, ಜೊತೆ ಕಾರ್ಯದರ್ಶಿಗಳಾದ ಸುರೇಶ್ ತಿರ್ಲೆ, ಮಹೇಶ್ ಆಚಾರ್ಯ ಪಾತೃಮಾಡಿ, ಜನಾರ್ದನ ಗೌಡ ಬರೆಮೇಲು, ಲಾವಣ್ಯ ಸಂದೇಶ್ ಏಡ್ಮೆ, ವೈದಿಕ ಸಮಿತಿ ಸಂಚಾಲಕರಾದ ರವಿಕುಮಾರ್ ಹೊಳ್ಳ ಸುಬ್ರಹ್ಮಣ್ಯ, ಕಾರ್ಯಾಲಯ ಸಮಿತಿ ಸಂಚಾಲಕ ವೆಂಕಪ್ಪ ಗೌಡ ಡೆಬ್ಬೇಲಿ, ಸ್ವಾಗತ ಸಮಿತಿ ಸಂಚಾಲಕ ರಾಮಕೃಷ್ಣ ಭಟ್ ಆಂಜರ, ಸಭಾ ನಿರ್ವಹಣಾ ಸಮಿತಿ ಸಹ ಸಂಚಾಲಕ ಜಯಾನಂದ ಬಂಟ್ರಿಯಾಲ್, ಬಾಲಚಂದ್ರ ರೈ ಪಾತೃಮಾಡಿ, ಪ್ರಚಾರ ಸಮಿತಿ ಸಂಚಾಲಕ ರಾಜಶೇಖರ್ ಹೊಸಮನೆ, ಸಹ ಸಂಚಾಲಕರಾದ ಬಾಬು ಪೂಜಾರಿ ಕಿನ್ಯಡ್ಕ, ಸಂದೇಶ್ ಏಡ್ಮೆ ಸಹಿತ ವಿವಿಧ ಸಮಿತಿ ಸಂಚಾಲಕರು, ಸಹ ಸಂಚಾಲಕರು, ಸದಸ್ಯರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಾವಿರಾರು ಭಕ್ತರು ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.
ಅರ್ಧ ಏಕಾಹ ಭಜನೆ;
ಫೆ.೧೦ರಂದು ಕ್ಷೇತ್ರದಲ್ಲಿ ಬೆಳಿಗ್ಗೆ ೬ರಿಂದ ಸಂಜೆ ೬ರ ತನಕ ಅರ್ಧ ಏಕಾಹ ಭಜನೆ ನಡೆಯಿತು. ತಿರ್ಲೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಕುಂತೂರು ಗಡಿಯಾರ್ನಡ್ಕ ಶ್ರೀ ಮಹಮ್ಮಾಯಿ ಭಜನಾ ಮಂಡಳಿ, ಪೋರೋಳಿ ಅಯೋಧ್ಯಾನಗರ ಶ್ರೀರಾಮ ಭಜನಾ ಮಂಡಳಿ, ಶಿವಾರು ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಇಚ್ಲಂಪಾಡಿ ಶ್ರೀ ಮಂಜುಶ್ರೀ ಭಜನಾ ಮಂಡಳಿ, ಉಪ್ಪಿನಂಗಡಿ ಶ್ರೀ ಶಾರದಾ ವನಿತ ಭಜನಾ ಮಂಡಳಿ, ಕೌಕ್ರಾಡಿ ಹೊಸಮಜಲು ಶ್ರೀ ಧರ್ಮಶ್ರೀ ಭಜನಾ ಮಂಡಳಿ, ಬಲ್ಯ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ, ಬಜತ್ತೂರು-ಮುದ್ಯ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ, ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಹಾಗೂ ಹಳೆನೇರೆಂಕಿ ಆರಟಿಕೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಯಕ್ಷಗಾನ:
ರಾತ್ರಿ ಶ್ರೀ ಕ್ಷೇತ್ರ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಸಾಕೇತ ಸಾಮ್ರಾಜ್ಞಿ ಯಕ್ಷಗಾನ ನಡೆಯಿತು.