ಪುತ್ತೂರು: ಶ್ರೀ ನಾಗ -ನಾಗಬ್ರಹ್ಮ ಶ್ರೀ ರಾಜನ್ ಸಪರಿವಾರ ದೈವಸ್ಥಾನ ಗ್ರಾಮ ಚಾವಡಿ ಬಡಬೆಟ್ಟು, ಕುಟ್ರುಪಾಡಿ ಗ್ರಾಮ ಇಲ್ಲಿಯ ವಾರ್ಷಿಕ ನೇಮೋತ್ಸವವು ಫೆ.28 ರಂದು ನಡೆಯಲ್ಲಿದ್ದು, ಆ ಪ್ರಯುಕ್ತ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.10 ರಂದು ದೈವಸ್ಥಾನದಲ್ಲಿ ನಡೆಯಿತು.
ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ಸುಬ್ರಾಯ ಹೆಬ್ಬಾರ್ ವೈದಿಕ ವಿಧಿ ವಿಧಾನ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶಶಾಂಕ್ ಗೋಖಲೆ, ಕಾರ್ಯದರ್ಶಿ ಜಿತೇಶ್ ನಾಲೂರು ಮತ್ತು ಸರ್ವ ಸದಸ್ಯರು ಹಾಗೂ ನೇಮೋತ್ಸವ ಸಮಿತಿಯ ಅಧ್ಯಕ್ಷ ಶಿವಣ್ಣ ಬಿ.ಎಚ್. ಭೀಮಗುಂಡಿ , ಕಾರ್ಯದರ್ಶಿ ರಮೇಶ್ ಕೆರೆಜಾಲು ಖಜಾಂಚಿ ಕಿರಣ್ ಕೊಡೆಂಕೀರಿ ಮತ್ತು ಸರ್ವ ಸದಸ್ಯರು ಹಾಗೂ ಪ್ರಮುಖರಾದ ಚಿದಾನಂದ ಕೊಡಂಕೀರಿ ಕೃಷ್ಣಪ್ಪ ಗೌಡ ಎಲ್ಯ, ಮೋನಪ್ಪ ಗೌಡ ಮರ್ವತ್ತಿಮಾರು, ಮೋನಪ್ಪ ಗೌಡ ಕಾರ್ಕಳ ಭಾಸ್ಕರಗೌಡ ಮರ್ವತ್ತಿಮಾರು, ಮೋಹನ್ ಚಂದ್ರ ಕೊಡಂಕೀರಿ, ಸುರೇಶ್ ಗೌಡ ಪೆಡ್ಡಣೆ ,ಆನಂದ ಗೌಡ ಕುಡೋಲ್ತಡ್ಡ, ಪುಟ್ಟಣ್ಣ ಗೌಡ ಹೊಸಮಠ, ಧನಂಜಯ ಬರೆಮೇಲು ,ಕುಶಾಲಪ್ಪ ಗೌಡ ಕೆರೆಜಾಲು, ರವಿಚಂದ್ರ ನಾಲೂರು, ಬಾಬು ಬಡಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.