ತಿರ್ಲೆ ಬ್ರಹ್ಮಕಲಶೋತ್ಸವ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ತಾಳಮದ್ದಳೆ

0

ಪುತ್ತೂರು: ಕಡಬ ತಾಲೂಕು ಕೊಣಾಲು ಗ್ರಾಮದ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಧೀಶಕ್ತಿ ಮಹಿಳಾ ಯಕ್ಷಬಳಗ, ತೆಂಕಿಲ ಪುತ್ತೂರು ಇವರಿಂದ ಶ್ರೀ ಗಣೇಶ ಕೊಲೆಕ್ಕಾಡಿ ವಿರಚಿತ ” ಸಮರ ಸೌಗಂಧಿಕಾ ” ಯಕ್ಷಗಾನ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ರಚನಾ ಚಿದ್ಗಲ್, ಸುಬ್ರಹ್ಮಣ್ಯ ಭಟ್,ಮದ್ದಳೆಯಲ್ಲಿ ಲಕ್ಷ್ಮೀಶ ಶಗ್ರಿತ್ತಾಯ, ಅಜಯ್ ರಾಜ್ ಶರಳಾಯ,ಚೆಂಡೆಯಲ್ಲಿ, ಮಾ ಅದ್ವೈತ ಕನ್ಯಾನ , ಅರುಣ್ ರಾಜ್ ಶರಳಾಯ,ಚಕ್ರತಾಳದಲ್ಲಿ ಕು| ಚೈತಾಲಿ ಕಾಂಚೋಡು ಸಹಕರಿಸಿದ್ದರು. ಮುಮ್ಮೇಳದಲ್ಲಿ, ಪದ್ಮಾ ಕೆ ಆರ್ ಆಚಾರ್ಯ (ಭೀಮಸೇನ),ಜಯಲಕ್ಷ್ಮಿ ವಿ ಭಟ್ ( ದ್ರೌಪದಿ), ಶಾಲಿನಿ ಅರುಣ್ ಶೆಟ್ಟಿ (ಹನುಮಂತ), ಶುಭಾ ಪಿ ಆಚಾರ್ಯ (ಕುಬೇರ), ಅರ್ಥವಾದಿಗಳಾಗಿ ಭಾಗವಹಿಸಿದ್ದರು.

ಸದಸ್ಯೆ ಜ್ಯೋತಿ ರಾವ್ ಸಹಕರಿಸಿದರು. ರವೀಂದ್ರ ಟಿ. ನೆಲ್ಯಾಡಿಯವರು ಕಾರ್ಯಕ್ರಮ ನಿರೂಪಿಸಿದರು. ದೇವಳದ ವತಿಯಿಂದ ಸಂಚಾಲಕರಾದ ಡಾ| ರಾಮಕೃಷ್ಣ ಭಟ್, ಅಂಜರ ದಂಪತಿಗಳು ಕಲಾವಿದರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here