ಲ್ಯಾಂಪ್ಸ್ ಸಹಕಾರ ಸಂಘದ 11 ಸ್ಥಾನಗಳಿಗೂ ನಿರ್ದೇಶಕರು ಅವಿರೋಧ ಆಯ್ಕೆ

0

ಪುತ್ತೂರು: ಪುತ್ತೂರು ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ(ಲ್ಯಾಂಪ್ಸ್) ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ಹಾಲಿ ಅಧ್ಯಕ್ಷರು, ಉಪಾಧ್ಯಕ್ಷರು, 4 ಮಂದಿ ನಿರ್ದೇಶಕರು ಸೇರಿದಂತೆ ಎಲ್ಲಾ 11 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಒಟ್ಟು 11 ಸ್ಥಾನಗಳನ್ನು ಒಳಗೊಂಡಿರುವ ಲ್ಯಾಂಪ್ಸ್‌ಗೆ ಒಟ್ಟು ೧೮ ಮಂದಿ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾದ ಫೆ.೧೦ರಂದು ನಾಮಪತ್ರ ಸಲ್ಲಿಸಿದ್ದ ೭ ಮಂದಿ ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದು ಎಲ್ಲಾ ೧೧ ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಸಾಮಾನ್ಯ ಸ್ಥಾನದಲ್ಲಿ ಆಲಂಕಾರು ಕ್ಷೇತ್ರದಿಂದ ಹಾಲಿ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್ ಶಾಂತಿಗುರಿ ಪೆರಾಬೆ, ಉಪ್ಪಿನಂಗಡಿ ಕ್ಷೇತ್ರದಿಂದ ಹಾಲಿ ಉಪಾಧ್ಯಕ್ಷ ಧರ್ಣಪ್ಪ ನಾಯ್ಕ ಬೊಳ್ಳಾವು, ಪಾಣಾಜೆ ಕ್ಷೇತ್ರದಿಂದ ಹಾಲಿ ನಿರ್ದೇಶಕ ಮಂಜುನಾಥ ಎನ್.ಎಸ್.ಉಪ್ಪಳಿಗೆ, ಮಾಡ್ನೂರು ಕ್ಷೇತ್ರದಿಂದ ಹಾಲಿ ನಿರ್ದೇಶಕ ಪೂವಪ್ಪ ನಾಯ್ಕ ಕೆ. ಕುಂಞಕುಮೇರು, ಒಳಮೊಗ್ರು ಕ್ಷೇತ್ರದಿಂದ ಅಪ್ಪಯ್ಯ ನಾಯ್ಕ ತಳೆಂಜಿ ಬಡಗ್ನನೂರು, ನೆಲ್ಯಾಡಿ ಕ್ಷೇತ್ರದಿಂದ ನೇತ್ರಾಕ್ಷ ಏಣಿತ್ತಡ್ಕ ಕೊಯಿಲ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಪುತ್ತೂರು ಸಾಮಾನ್ಯ ಕ್ಷೇತ್ರದಿಂದ ಕರುಣಾಕರ ಟಿ.ಎನ್ ಪಾಂಗ್ಲಾಯಿ, ಆರ್ಯಾಪು ಕ್ಷೇತ್ರದಿಂದ ನಾರಾಯಣ ನಾಯ್ಕ ಕೂಟೇಲು ಬಲ್ನಾಡು, ಸವಣೂರು ಕ್ಷೇತ್ರದಿಂದ ಮಹಾಲಿಂಗ ಬಿ. ನಾಯ್ಕ ನರಿಮೊಗರು, ಮಹಿಳಾ ಸಾಮಾನ್ಯ ಕ್ಷೇತ್ರದಿಂದ ರಾಧಾ ಹೆಂಗ್ಸು ಮುಡಾಲ ಒಳಮೊಗ್ರು ಹಾಗೂ ಪುತ್ತೂರು ಕ್ಷೇತ್ರದಿಂದ ಜಯಶ್ರೀ ಮೊಟ್ಟೆತ್ತಡ್ಕರವರು ನೂತನವಾಗಿ ಅವಿರೋಧ ಆಯ್ಕೆಯಾಗಿದ್ದಾರೆ.


ನಾಮಪತ್ರ ಹಿಂತೆಗೆದುಕೊಳ್ಳು ಅಂತಿಮ ದಿನವಾದ ಫೆ.10ರಂದು ನಾಮಪತ್ರ ಸಲ್ಲಿಸಿದ್ದ ೭ ಮಂದಿ ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಪುತ್ತೂರು ಕ್ಷೇತ್ರದಿಂದ ಹಾಲಿ ನಿರ್ದೇಶಕಿ ಭವ್ಯ ಅರ್ಯಾಮುಗೇರು, ಜನಾರ್ದನ ಕೆ ನೆಹರು ನಗರ, ಸವಣೂರು ಕ್ಷೇತ್ರದಿಂದ ಹಾಲಿ ನಿರ್ದೇಶಕಿ ಅಶ್ವಿನಿ ಬಿ.ಕೆ. ಮುಂಡೂರು, ಸುಂದರ ನಾಯ್ಕ ಬಿ.ಕೆ., ಬರೆಕೋಲಾಡಿ, ಉಪ್ಪಿನಂಗಡಿ ಕ್ಷೇತ್ರದಿಂದ ಮಾಧವ ಕಿನ್ನೆತ್ತಿಪಲಿಕೆ ಕೋಡಿಂಬಾಡಿ, ಆರ್ಯಾಪು ಕ್ಷೇತ್ರದಿಂದ ಶ್ರೀಧರ ಮಿನಿಪದವು, ಪಾಣಾಜೆ ಕ್ಷೇತ್ರದಿಂದ ಪುರಂದರ ಸಿ.ಹೆಚ್ ಚಾಕೋಟೆ ಇರ್ದೆ ಇವರುಗಳು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿರುತ್ತಾರೆ. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಚುನಾವಣಾಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇಸಪ್ಪ ನಾಯ್ಕ ಹಾಗೂ ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here