‘ನನ್ನನ್ನು ಕೆಣಕಲು ಬರಬೇಡಿ, ನಿಮ್ಮ ಬಯೋಡಾಟ ನನ್ನಲ್ಲಿದೆ’ – ಮಾಜಿ ಸಂಸದ, ಹಾಲಿ ಎಂ.ಎಲ್.ಸಿ ಆರೋಪಕ್ಕೆ ತಿರುಗೇಟು ನೀಡಿದ ಶಾಸಕ ಅಶೋಕ್ ರೈ

0

ಪುತ್ತೂರು: ಹತ್ತಿಪ್ಪತ್ತು ವರ್ಷ ಸಂಸದರಾದ ನಳಿನ್ ಕುಮಾರ್ ಕಟೀಲು ಇಲ್ಲಿ ಏನು ಸಾಧನೆ ಮಾಡಿದ್ದಾರೆ. ನನ್ನ ಬಾಯಿಗೆ ಕೈ ಹಾಕಲು ಬರಬೇಡಿ ನಿಮಗೆ ಬಿಡಲು ನನ್ನಲ್ಲಿ 10 ಸಾವಿರ ಬಾಣವಿದೆ. ಅದೇ ರೀತಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಅವರ ಎಲ್ಲಾ ಬಯೋಡಾಟ ನನ್ನಲ್ಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ತನ್ನ ಮೇಲೆ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.


ದೇವಸ್ಥಾನದ ಜಾಗದಲ್ಲಿ ರಾಜೇಶ್ ಬನ್ನೂರು ಅವರಿದ್ದ ಮನೆಯ ತೆರವಿಗೆ ಸಂಬಂಧಿಸಿ ಶಾಸಕ ಅಶೋಕ್ ರೈ ಅವರ ವಿರುದ್ಧ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಎಂ.ಎಲ್.ಸಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಹಲವು ಆರೋಪ ಮಾಡಿದ್ದರು. ಈ ಆರೋಪಕ್ಕೆ ಶಾಸಕ ಅಶೋಕ್ ರೈ ಅವರು ಫೆ.11 ರಂದು ದೇವಳದ ಪುಷ್ಕರಣಿಯ ಬಳಿ ನಡೆದ ಭಕ್ತರ ಕರಸೇವೆ ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದರು.

ನಳಿನ್ ಕುಮಾರ್ ಕಟೀಲ್ ಅವರು ಕೂಡಾ ಮಹಾಲಿಂಗೇಶ್ವರ ದೇವರ ಅಭಿವೃದ್ದಿ ಕೆಲಸದಲ್ಲಿ ಪಾಲ್ಗೊಂಡವರು. ಅವರು ಅವತ್ತು ಬ್ರಹ್ಮಕಲಶ ಮಾಡಿದ್ದರು. ಆಗ ಅವರಿಗೆ ಅಭಿವೃದ್ದಿಗಾಗಿ ಕಟ್ಟಡ ತೆರವು ಮಾಡಲು ಅಗಿಲ್ಲ. ಈಗ ನಾವು ತೆರವು ಮಾಡುವಾಗ ನೀವು ಏನೇನೋ ಹೇಳಿಕೆ ಕೊಡುವುದು ಸರಿಯಲ್ಲ. ನಿಮ್ಮ ಆರೋಪಕ್ಕೆ ಉತ್ತರ ಕೊಟ್ಟರೆ ನಿಮಗೆ ಇನ್ನಷ್ಟು ತೊಂದರೆ ಆಗುತ್ತದೆ. ನನ್ನಲ್ಲಿ ಬೇಕಾದಷ್ಟು ಬಾಣಗಳಿವೆ ಎಂದರು. ಇನ್ನೋರ್ವರಾದ ಕಿಶೋರ್ ಬೊಟ್ಯಾಡಿ ಅವರು ನನ್ನ ಆತ್ಮೀಯರು. ಅದರೆ ಅವರ ಹಿಸ್ಟರಿ ನೋಡಿದರೆ ಅವರು ಗೂಂಡಾಗಿರಿ ವಸೂಲಿ ಮಾತ್ರ. ಬೇರೆನು ಮಾಡಲೇ ಇಲ್ಲ. ಇಲ್ಲಿ ಅವರು ಎಮ್ ಎಲ್ ಸಿ ಆಗಿ 6 ತಿಂಗಳಾಯಿತು. ಒಂದೇ ಒಂದು ಅನುದಾನ ತಂದಿದ್ದರೆ ಹೇಳಲಿ. ಇನ್ನೂ ಅವರಿಗೆ ಅವಕಾಶವಿದೆ. 50 ಕೋಟಿ ರೂಪಾಯಿ ಅನುದಾನ ತಂದು ಕೊಡಲಿ ಎಂದ ಶಾಸಕರು ನನ್ನನ್ನು ಕೆಣಕಲು ಬರಬೇಡಿ. ನಿಮ್ಮ ಸಾಧನೆ, ಇತಿಹಾಸ, ಬಯೋಡೆಟಾ ಎಲ್ಲ ನನ್ನಲ್ಲಿದೆ. ಆದರೆ ಇಲ್ಲಿ ಮಾಧ್ಯಮದವರಿದ್ದಾರೆ. ನಿಮಗೆ ಕಿವಿ ಮಾತು ಹೇಳುತ್ತೇನೆ. ಧರ್ಮದಲ್ಲಿ ರಾಜಕಾರಣ ಮಾಡಬೇಡಿ ಎಂದು ಹೇಳಿದರು.

LEAVE A REPLY

Please enter your comment!
Please enter your name here