ನಿಡ್ಪಳ್ಳಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಟ್ಟಂಪಾಡಿಯಲ್ಲಿ 2025- 26 ನೇ ಸಾಲಿನ ಎಲ್.ಕೆ.ಜಿ, ಯು.ಕೆ.ಜಿ ತರಗತಿ ಆರಂಭ ಹಾಗೂ 1 ರಿಂದ 7ನೇ ತರಗತಿವರೆಗಿನ ಶಾಲಾ ಮಕ್ಕಳ ದಾಖಲಾತಿ ಆಂದೋಲನವನ್ನು ಫೆ.10 ರಂದು ಹಮ್ಮಿ ಕೊಳ್ಳಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸೌಮ್ಯಶ್ರೀ. ವಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದಾಖಲಾತಿ ಆಂದೋಲನ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ, ಜೊತೆ ಕಾರ್ಯದರ್ಶಿ ಶೇಷನ್ ಪಾರ, ಸಮಿತಿ ಸದಸ್ಯ ಪ್ರಭಾಕರ ರೈ ಬಾಜುವಳ್ಳಿ ,ಅಬ್ದುಲ್ ಲತಿಫ್ ,ಉಚಿತ್ ಕುಮಾರ್, ಬಿ.ಎ ಮಹಮ್ಮದ್ ಕುಂಞಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಕಾವೇರಿ, ಸರೋಜಿನಿ, ಪೂಜಾ ,ತಿಮ್ಮಪ್ಪ ಶೆಟ್ಟಿ ,ಹಿರಿಯ ವಿದ್ಯಾರ್ಥಿ ಲಿಂಗಪ್ಪ, ಅಶ್ರಫ್ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಉಪಸ್ಥಿತರಿದ್ದರು. ಈ ತಂಡದ ಸದಸ್ಯರು ಮಕ್ಕಳ ಮನೆ ಮನೆ ಭೇಟಿ ಮಾಡಿ ಪೋಷಕರ ಮನವೊಲಿಸಿ ದಾಖಲಾತಿ ಮಾಡುವಂತೆ ವಿನಂತಿಸಲಾಯಿತು. ಇಲಾಖೆಯ ಉಚಿತ ಸೌಲಭ್ಯಗಳ ಹಾಗೂ ಶಿಕ್ಷಣದ ಬಗ್ಗೆ ಇಲಾಖೆಯ ಸಿ.ಆರ್.ಪಿ ಪರಮೇಶ್ವರಿ ಮಾಹಿತಿ ನೀಡಿದರು.
ಪ್ರಭಾರ ಮುಖ್ಯ ಶಿಕ್ಷಕಿ ಮಮತಾ ಸ್ವಾಗತಿಸಿ ವಿದ್ಯಾದಾನಿಗಳ ಸಹಕಾರದ ವಿವರ ನೀಡಿದರು. ಹಿರಿಯ ಶಿಕ್ಷಕಿ ಪುಷ್ಪ. ಕೆ .ಆರ್ ವಂದಿಸಿದರು.