ಪುತ್ತೂರು: ಟಾಟಾ ಎಐಎ ಕರ್ನಾಟಕ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆಯು ಪುತ್ತೂರು ಬ್ರ್ಯಾಂಚ್‌ನಲ್ಲಿ ಫೆ.8 ರಂದು ಜರಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಾಟಾ ಎಐಎಯ ಅಸೋಸಿಯೇಟ್ ಡೈರೆಕ್ಟರ್ ಆಫ್ ಟ್ರೈನಿಂಗ್ ದಿವ್ಯ ಪ್ರವೀಣ್ ಶೆಟ್ಟಿ, ಚೀಪ್ ಬ್ಯುಸಿನೆಸ್ ಅಸೋಸಿಯೇಟ್ಸ್ ರಾಜೇಶ್ ಡಿ ಶೆಣೈ, ಎಲ್‌ಐಸಿ ಎಂಡಿಆರ್‌ಟಿ ರತ್ನಾಕರ ರೈ ಕೆದಂಬಾಡಿಗುತ್ತು, ಬ್ರ್ಯಾಂಚ್ ಮ್ಯಾನೇಜರ್‌ಗಳಾದ ಮನೋಜ್ ಗೊನ್ಸಾಲೀಸ್, ರಾಘವೇಂದ್ರ ನಾಯಕ್ ಭಾಗವಹಿಸಿದ್ದರು. ಸುರೇಶ್ ಕುಮಾರ್ ಸುಶಾ ಸ್ವಾಗತಿಸಿದರು. ರಾಘವೇಂದ್ರ ನಾಯಕ್ ವಂದಿಸಿದರು. ಜೆಸಿಐ ದಾಮೋದರ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಟಾಟ ಸಂಸ್ಥೆಯ ಗ್ರಾಹಕರು ಭಾಗವಹಿಸಿದ್ದರು. ಟಾಟಾ ಎಐಎ ಸಂಸ್ಥೆಯ 25 ವರ್ಷಗಳ ಸಂಭ್ರಮಾಚರಣೆ ಮೊದಲ ಬಾರಿಗೆ ಪುತ್ತೂರಿನಲ್ಲಿ ನಡೆಯಿತು.