ಪುತ್ತೂರು: ಕೋರ್ಟ್‌ರಸ್ತೆ ವಿಶ್ವ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ಇತ್ತೀಚೆಗೆ ನಡೆದಿದ್ದು, ಇದರಲ್ಲಿ ಅಧ್ಯಕ್ಷರಾಗಿ ನ್ಯಾಯವಾದಿ ರಾಕೇಶ್ ಮಸ್ಕರೇನ್ಹಸ್‌ರವರು ಹಾಗೂ ಉಪಾಧ್ಯಕ್ಷರಾಗಿ ಸುನಿಲ್ ಶೈಲೇಶ್ ಮಸ್ಕರೇನ್ಹಸ್‌ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
![](https://puttur.suddinews.com/wp-content/uploads/2025/02/ಸದ್ದಞ್ಗಗ.jpg)
ಉಳಿದಂತೆ ನಿರ್ದೇಶಕರುಗಳಾಗಿ ರೋಯಿಸ್ಟನ್ ಡಾಯಸ್, ಪವನ್ ಜೋನ್ ಮಸ್ಕರೇನ್ಹಸ್, ವಿಜಯ್ ವಿಲ್ಫ್ರೆಡ್ ಡಿ’ಸೋಜ, ಲೆಸ್ಟರ್ ಪಿಂಟೊ, ಸಿಲ್ವೆಸ್ಟರ್ ಗೊನ್ಸಾಲ್ವಿಸ್, ಮೌರಿಸ್ ಮಸ್ಕರೇನ್ಹಸ್, ಹಿಲ್ಡಾ ಮಿನೇಜಸ್, ಶೈನಿ ಎಸ್.ಎಸ್‌ರವರು, ಕಾರ್ಯದರ್ಶಿಯಾಗಿ ಮೇಬಲ್ ಗ್ರೇಸಿ ಮಾಡ್ತಾ, ಸಿಬ್ಬಂದಿ ಒಲಿವಿಯಾ ರೆಬೆಲ್ಲೊ ಕಾರ್ಯ ನಿರ್ವಹಿಸಲಿದ್ದಾರೆ. ಸೊಸೈಟಿಗೆ ಒಟ್ಟು ಹತ್ತು ಮಂದಿ ನಿರ್ದೇಶಕರ ಆಯ್ಕೆಯಾಗಬೇಕಿದ್ದು 20 ಮಂದಿ ಆಭ್ಯರ್ಥಿಗಳು ಸ್ಪರ್ಧಿಸಿದ್ದರು. ಸಾಮಾನ್ಯ ಸ್ಥಾನದಲ್ಲಿ 7, ಮಹಿಳಾ ಮೀಸಲು ಸ್ಥಾನಕ್ಕೆ 2 ಹಾಗೂ ಹಿಂದುಳಿದ ಪ್ರವರ್ಗ ಬಿ ಸ್ಥಾನದಲ್ಲಿ ಒಂದು ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಚುನಾವಣಾಧಿಕಾರಿಯಾಗಿ ರಿಟರ್ನಿಂಗ್ ಆಫೀಸರ್ ಶೋಭಾ ಎನ್.ಎಸ್ ಕಾರ್ಯ ನಿರ್ವಹಿಸಿದ್ದರು.
ಸೊಸೈಟಿಗೆ 25ನೇ ವರ್ಷ:
ಗ್ಲೋರಿಯಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2000ರಲ್ಲಿ ಆರಂಭಗೊಂಡಿದ್ದು ಕಾಸ್ಮೀರ್ ಕುಟಿನ್ಹಾರವರು ಇದರ ಪ್ರಥಮ ಅಧ್ಯಕ್ಷರಾಗಿರುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಜ್ಯೋ ಡಿ’ಸೋಜ, ಜೋಕಿಂ ರೆಬೆಲ್ಲೋ, ಜೆರಾಲ್ಡ್ ಲ್ಯಾನ್ಸಿ ಮಸ್ಕರೇನ್ಹಸ್, ರಾಕೇಶ್ ಮಸ್ಕರೇನ್ಹಸ್‌ರವರು ಸೊಸೈಟಿಯನ್ನು ಮುನ್ನೆಡಿಸಿರುತ್ತಾರೆ. ಇದೀಗ ಸೊಸೈಟಿಯು 25 ವರ್ಷವನ್ನು ಕಾಣುತ್ತಿದ್ದು ಅದು ಇಲ್ಲಿಯವರೆಗೆ ಚುನಾವಣೆಯನ್ನು ಕಂಡಿರದೆ ನಿರ್ದೇಶಕರ ಆಯ್ಕೆಯು ಅವಿರೋಧವಾಗಿ ನಡೆದಿರುತ್ತದೆ. ಇದೀಗ ಪ್ರಥಮ ಬಾರಿ ಸೊಸೈಟಿಗೆ ಚುನಾವಣೆಯು ನಡೆದಿತ್ತು.
ಅಧ್ಯಕ್ಷ, ಉಪಾಧ್ಯಕ್ಷರ ಪರಿಚಯ..
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ರಾಕೇಶ್ ಮಸ್ಕರೇನ್ಹಸ್‌ರವರು ಇದೀಗ ಗ್ಲೋರಿಯಾ ಸೊಸೈಟಿಗೆ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇವರು ಪುತ್ತೂರು ವಕೀಲರ ಸಂಘದ ಸದಸ್ಯರಾಗಿ, ಕ್ರೈಸ್ತ ವಿವಾಹ ನೋಂದಣಾಧಿಕಾರಿಯಾಗಿ, ಡೊನ್ ಬೊಸ್ಕೊ ಕ್ಲಬ್ ಸದಸ್ಯರಾಗಿ ವಿವೇಕಾನಂದ ಕಾನೂನು ಕಾಲೇಜು ಹಿರಿಯ ವಿದ್ಯಾರ್ಥಿಯಾಗಿ, ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿಯಾಗಿರುತ್ತಾರೆ. ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿಇ ಮೆಕ್ಯಾನಿಕಲ್ ಪದವೀಧರ ಸುನಿಲ್ ಶೈಲೇಶ್ ಮಸ್ಕರೇನ್ಹಸ್‌ರವರು ಗ್ಲೋರಿಯಾ ಸೊಸೈಟಿಯಲ್ಲಿ ಒಂದು ಬಾರಿ ನಿರ್ದೇಶಕರಾಗಿ, ಡೊನ್ ಬೊಸ್ಕೊ ಕ್ಲಬ್‌ನಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಿ, ಮಾಯಿದೆ ದೇವುಸ್ ಚರ್ಚ್ ಆರ್ಥಿಕ ಸಮಿತಿ ಸದಸ್ಯರಾಗಿ, ಎರಡು ಬಾರಿ ಪಾಲನಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಮುಖ್ಯರಸ್ತೆಯ ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರೀಸ್‌ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.