ಫೆ.16:ಕುರಿಯ ಕಿನ್ನಿಮಜಲು ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ

0

ಪುತ್ತೂರು: ತುಳುನಾಡಿನ ಉದ್ದಗಲಕ್ಕೂ ತಮ್ಮ ವೀರತ್ವವನ್ನು, ಕಾರಣಿಕವನ್ನು ಮೆರೆದ ವೀರ ಪುರುಷರಾದ ಕೋಟಿ-ಚೆನ್ನಯರಿಗೆ ಈ ನಾಡಿನ ಹಲವು ಕಡೆಗಳಲ್ಲಿ ಆರಾಧನಾ ಕ್ಷೇತ್ರಗಳಿವೆ. ಅವಳಿ ವೀರರು ಕೋಟಿ-ಚೆನ್ನಯರ ಇತಿಹಾಸದಲ್ಲಿ ತನ್ನದೇ ಆದ ಕಾರಣಿಕವನ್ನು ಮೆರೆದು ಭಕ್ತರನ್ನು ಸಲುಹಿಸಿದ ಗರಡಿಗಳಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಿನ್ನಿಮಜಲು ಅಗ್ರಪಂಕ್ತಿಯಲ್ಲಿದೆ.
ತುಳುನಾಡಿನ ಗರಡಿಗಳಲ್ಲಿ ಆರಾಧನೆ ಪಡೆಯುತ್ತಿರುವ ಪ್ರಶ್ನಾಚಿಂತನೆಯಂತೆ ಪ್ರತಿಷ್ಟಾಪನೆಗೊಂಡ ಗರಡಿಯು ವರ್ಷಂಪ್ರತಿ ವಿಜ್ರಂಭಣೆಯಿಂದ ನೇಮೋತ್ಸವವನ್ನು ಆಚರಣೆ ಮಾಡುತ್ತಾ ಬಂದಿದ್ದು, ಈ ಬಾರಿಯೂ ಫೆ.16 ರಂದು ಕೀರ್ತಿಶೇಷ ಕೆ.ಗಿರಿಯಪ್ಪ ಪೂಜಾರಿಯವರ ಪತ್ನಿ ಮತ್ತು ಮಕ್ಕಳ ಆಡಳಿತದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವದ ನೇಮೋತ್ಸವವು ಮೂಡಿ ಬರಲಿದೆ.


ಬೆಳಿಗ್ಗೆ ಸ್ಥಳ ಶುದ್ಧಿ, ಪುಣ್ಯಾಹವಾಚನ, ಶ್ರೀ ಗಣಪತಿ ಹೋಮ, ಬ್ರಹ್ಮ ದೇವರ ತಂಬಿಲ, ಕೋಟಿ-ಚೆನ್ನಯರಿಗೆ ತಂಬಿಲ, ಸಾಯಂಕಾಲ ಭಂಡಾರ ತೆಗೆಯುವುದು, ರಾತ್ರಿ ಬೈದರ್ಕಳ ಗರಡಿ ಇಳಿಯುವುದು, ಮಾಯಾಂದಾಲ್(ಮಾಣಿಬಾಲೆ) ಗರಡಿ ಇಳಿಯುವುದು, ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ, ಫೆ.17 ರಂದು ಬೆಳಿಗ್ಗೆ ಕೋಟಿ-ಚೆನ್ನಯರ ದರ್ಶನ ಪಾತ್ರಿಗಳ ಸೇಟ್, ಬಳಿಕ ಬೈದೇರುಗಳ ಸೇಟ್ ಮತ್ತು ಅರುಣೋದಯಕ್ಕೆ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಕುರಿಯ ಕಿನ್ನಿಮಜಲು ಗರಡಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here