ಪುತ್ತೂರು: ಬೆಂಗಳೂರು ಅರಮನೆಯಲ್ಲಿ ಗುರುವಾರ ನಡೆದ ‘ಇನ್ವೆಸ್ಟ್ ಕರ್ನಾಟಕ-2025’ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಪ್ರಗತಿ ಹೊಂದುತ್ತಿರುವ ಯಶಸ್ವಿ ಕೈಗಾರಿಕೆಗಳನ್ನು ಗುರುತಿಸಿ ಗೌರವಿಸುವ ಯೋಜನೆಯಡಿ, ಜಿಲ್ಲಾವಾರು ಘಟಕಗಳ ಆಯ್ಕೆಯಲ್ಲಿ ಕೂಡೂರು ರಾಮಚಂದ್ರ ಭಟ್ ಮಾಲೀಕತ್ವದ ಮಂಗಳೂರಿನ ಒಷಿಮಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕಂಪನಿ ಗೌರವಕ್ಕೆ ಪಾತ್ರವಾಗಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಚಲುವರಾಯ ಸ್ವಾಮಿ, ರಾಮಲಿಂಗಾರೆಡ್ಡಿ ಉಪಸ್ಥಿತರಿದ್ದರು. 30 ವರ್ಷ ಹಿಂದೆ ಬೈಕಂಪಾಡಿಯಲ್ಲಿ ವೆಲ್ಡಿಂಗ್ ಎಲೆಕ್ಟೋಡ್ ಉತ್ಪಾದನೆಗೆ ಸ್ಥಾಪನೆಗೊಂಡ ಈ ಕಂಪನಿ ಉತ್ತಮ ಗ್ರಾಹಕ ಸ್ನೇಹಿ ವ್ಯವಹಾರಗಳಿಂದ ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ಅಪಾರ ಗ್ರಾಹಕರನ್ನು ಹೊಂದಿದೆ. ಕೇಂದ್ರ ಹಾಗೂ ರಾಜ್ಯದ ಕೆಲವು ಇಲಾಖೆಗಳಿಂದ ಉತ್ತಮ ಆರ್ಥಿಕ ನಿರ್ವಹಣೆ ಮತ್ತು ಪರಿಸರ:” ಸ್ನೇಹಿ ಕಾರ್ಯಾಚರಣೆಗಳಿಗಾಗಿ ಪ್ರಶಸ್ತಿಗಳನ್ನು ಪಡೆದಿದೆ.