
ಪುತ್ತೂರು ಪತ್ರಿಕಾ ಭವನದಲ್ಲಿ ಬೆಳಿಗ್ಗೆ ೧೧ರಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ಮಹಾಸಭೆ
ಪುತ್ತೂರು ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಕಚೇರಿಯಲ್ಲಿ ಬೆಳಿಗ್ಗೆ ೧೧ರಿಂದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಯ ಚುನಾವಣೆಯ ನಾಮಪತ್ರ ಸಲ್ಲಿಕೆ
ಅಡ್ಡಹೊಳೆ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೧ಕ್ಕೆ ಶಿರಾಡಿ ಗ್ರಾ.ಪಂ ೩ನೇ ವಾರ್ಡ್‌ನ ವಾರ್ಡುಸಭೆ
ಮಾಂತೂರು ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸವಣೂರು ೨, ೩ನೇ ವಾರ್ಡ್, ಕುಮಾರಧಾರ ಸಭಾಂಗಣದಲ್ಲಿ ಅಪರಾಹ್ನ ೨.೩೦ಕ್ಕೆ ಸವಣೂರು ೧ನೇ ವಾರ್ಡ್‌ನ ವಾರ್ಡುಸಭೆ
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಬೆಳಿಗ್ಗೆ ೧೧ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಾಮಪತ್ರ ಸಲ್ಲಿಕೆ
ಮುಂಡೂರು ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಬಡಗನ್ನೂರು ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ವಿಶೇಷ ಚೇತನರ ವಿಶೇಷ ಗ್ರಾಮಸಭೆ
ಪೆರ್ಲಂಪಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೧ಕ್ಕೆ ಕೊಳ್ತಿಗೆ ಗ್ರಾ.ಪಂ ೩ನೇ ವಾರ್ಡ್, ಮಾಲೆತ್ತೋಡಿ ಸಮುದಾಯ ಭವನದಲ್ಲಿ ಅಪರಾಹ್ನ ೨ಕ್ಕೆ ೪ನೇ ವಾರ್ಡ್, ಕುಂಟಿಕಾನ ಹಿ.ಪ್ರಾ. ಶಾಲೆಯಲ್ಲಿ ೪ಕ್ಕೆ ೧ನೇ ವಾರ್ಡ್‌ನ ವಾರ್ಡುಸಭೆ
ಉಪ್ಪಿನಂಗಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಬಳ್ಪ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦ಕ್ಕೆ ವಾರ್ಡ್ ಸಭೆ
ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ ೧೦ರಿಂದ ಯುವನಿಧಿ ನೋಂದಾವಣೆ ಅರ್ಜಿ ವಿಲೇವಾರಿ ಶಿಬಿರ
ಉಪ್ಪಳಿಗೆ ಶಾಲಾ ವಠಾರದಲ್ಲಿ ಸಂಜೆ ೫.೪೫ರಿಂದ ಉಪ್ಪಳಿಗೆ ಶ್ರೀ ವಿಷ್ಣು ಬಯಲಾಟ ಸೇವಾ ಸಮಿತಿಯಿಂದ ೯ನೇ ವರ್ಷದ ಯಕ್ಷಗಾನ ಬಯಲಾಟ-ಶ್ರೀ ದೇವಿ ಮಹಾತ್ಮೆ
ವೀರಮಂಗಲ ಪಿಎಂಶ್ರೀ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ನರಿಮೊಗರು ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್. ಕಲಿಕಾ ಹಬ್ಬ
ಪುಣಚ ಗ್ರಾಮದ ಹಿತ್ತಿಲು ಎಂಬಲ್ಲಿ ದೊಡ್ಡಮನೆ ಕುಟುಂಬದ ಶ್ರೀ ಸಪರಿವಾರ ನಾಗಬ್ರಹ್ಮಸ್ಥಾನದಲ್ಲಿ ಪ್ರತಿಷ್ಠಾವರ್ಧಂತಿ, ಬೆಳಿಗ್ಗೆ ಅಭಿಷೇಕ, ನಾಗತಂಬಿಲ ಸೇವೆ, ಪರಿವಾರ ದೈವಗಳಿಗೆ ತಂಬಿಲ ಸೇವೆ, ಹರಿಕೆ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ
ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ ೯.೩೦ರಿಂದ ಆರ್ಲಪದವು ಹೊಸಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್‌ನ ೮ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ೨೦ ಬಡ ಕುಟುಂಬಗಳಿಗೆ ಸಹಾಯಧನ, ಸಾಧಕರಿಗೆ ಗೌರವಾರ್ಪಣೆ
ಕುದ್ಮಾರು ಗ್ರಾಮ ಕಾರ್ಲಾಡಿ ಕಾರ್ತಿಕೇಯ ನಿಲಯದಲ್ಲಿ ರಾತ್ರಿ ೮ರಿಂದ ಅಂಗಾರೆ ಪೂಜೆ