ಪುತ್ತೂರು:ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಮುಂದಿನ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾಗಿ ಕೇಶವ ಪೂಜಾರಿ ಬೆದ್ರಾಳ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತುರವರ ನೇತೃತ್ವದಲ್ಲಿ ಫೆ.18ರಂದು ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈಯವರು ಮಾತನಾಡಿ, ನೂತನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಶುಭಹಾರೈಸಿದರು. ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಉಪತಹಶೀಲ್ದಾರ್ ಸುಲೋಚನ ಪಿ.ಕೆ., ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಗಣೇಶ್ ಬಂಗೇರ, ಸುಬ್ರಾಯ ಅಂಗಿತ್ತಾಯ, ಕುರಿಯ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ರಮೇಶ್ ಗೌಡ ಕೆಮ್ಮಿಂಜ, ಗಣೇಶ್ ಗೌಡ ನೈತ್ತಾಡಿ, ಶಶಿರಾಜ್ ಕೆಮ್ಮಿಂಜೆ, ಲೋಕೇಶ್ ಮುಕ್ರಂಪಾಡಿ, ಜಯಶ್ರೀ ದರ್ಬೆ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಬಾಲಕೃಷ್ಣ ಪೂಜಾರಿ, ಕೋಲಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಸಂತ ಕುಮಾರ್ ನಾಯ್ಕ ನೆಕ್ಕರೆ, ಲಲಿತಾ ಕೆ. ದೇವಸ್ಥಾನ ರಸ್ತೆ, ರೇಖಾ ಬಿ.ಎಸ್. ಸಂಜಯನಗರ, ಸೂರಪ್ಪ ಗೌಡ ಸಂಜಯನಗರ, ಚಂದ್ರಶೇಖರ ಕೆ. ಕಲ್ಲಗುಡ್ಡೆ, ರಕ್ಷಿತ್ ಎಸ್. ನಾಯ್ಕ್ ಕರಿಯಾಲ, ಮಹೇಶ್ ಬಿ. ಕಾವೇರಿಕಟ್ಟೆ, ಅರ್ಚಕರಾದ ವೆಂಕಟಕೃಷ್ಣ ಭಟ್ ಹಾಗೂ ರಮೇಶ್ ಭಟ್ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

ಅಧ್ಯಕ್ಷರ ಪರಿಚಯ:
ಬೆದ್ರಾಳ ನೆಕ್ಕರೆ ನಿವಾಸಿಯಾಗಿರುವ ಕೇಶವ ಪೂಜಾರಿಯವರು, ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರ ಕಾರ್ಯದರ್ಶಿಯಾಗಿ, ಗೋಕರ್ಣನಾಥೇಶ್ವರ ಬ್ಯಾಂಕ್‌ನ ನಿರ್ದೇಶಕರಾಗಿ, ಅನುಮತಿ ಪಡೆದ ವಿದ್ಯುತ್ ಗುತ್ತಿಗೆ ದಾರರ ಪುತ್ತೂರು ಸಂಘದ ಉಪಾಧ್ಯಕ್ಷರಾಗಿ, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ನಗರ ಸಮಿತಿ ಅಧ್ಯಕ್ಷರಾಗಿ, ಯುವ ವಾಹಿನಿಯ ಸದಸ್ಯರಾಗಿ ಹಾಗೂ ಸಣ್ಣ ಕೈಗಾರಿಕಾ ಸಹಕಾರ(ಸಿಡ್ಕೋ) ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಾಗಿ ದರ್ಬೆಯಲ್ಲಿ ನಂದಿಕೇಶ್ವರ ಇಲೆಕ್ಟ್ರಿಕಲ್ ಮ್ಹಾಲಕರಾಗಿರುತ್ತಾರೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನಮ್ಮನ್ನು ಆಯ್ಕೆ ಮಾಡುವ ಮೂಲಕ ದೇವರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಹಾಗೂ ಎರಡನೇ ಬಾರಿಗೆ ಅಧ್ಯಕ್ಷನನ್ನಾಗಿ ನನ್ನನ್ನು ಆಯ್ಕೆ ಮಾಡಿದ ಸಮಿತಿ ಸದಸ್ಯರಿಗೆ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ದೇವಸ್ಥಾನದ ಎಲ್ಲಾ ದೇವರ ಕೆಲಸ ಕಾರ್ಯಗಳು ಹಾಗೂ ಅಭಿವೃದ್ಧಿಯಲ್ಲಿ ಭಕ್ತಾದಿಗಳು ಸಹಕರಿಸುವಂತೆ ವಿನಂತಿಸುತ್ತೇನೆ.-ಕೇಶವ ಪೂಜಾರಿ ಬೆದ್ರಾಳ, ಅಧ್ಯಕ್ಷರು ವ್ಯವಸ್ಥಾನಾ ಸಮಿತಿ