ರೋಟರಿಯ ಪ್ರಾಮಾಣಿಕ ಸೇವೆಯನ್ನು ಜನ ಮೆಚ್ಚಿದ್ದಾರೆ-ವಿಕ್ರಂ ದತ್ತ
ಪುತ್ತೂರು: ಸಮಾಜದಲ್ಲಿ ನಾವು ಜೀವಿಸುವಾಗ ಜಾತಿ, ಧರ್ಮ ಮರೆತು ಸಹೋದರತ್ವ ಭಾವನೆಯಿಂದ ಜೀವಿಸುವುದು ವಾಸ್ತವತೆ. ರೋಟರಿ ಸಂಸ್ಥೆಯು ದೇಶದ ಪ್ರಗತಿಯಲ್ಲಿ ಪ್ರಾಮಾಣಿಕವಾಗಿ ಬಹಳಷ್ಟು ಕೊಡುಗೆ ನೀಡಿದ್ದು ಯಾರು ಪ್ರಾಮಾಣಿಕ ಸೇವೆಯನ್ನು ನೀಡುತ್ತಾರೋ ಜನರು ಮೆಚ್ಚುಗೆಯನ್ನು ಸೂಚಿಸುತ್ತಾರೆ ಜೊತೆಗೆ ದೇವರು ಆಶೀರ್ವದಿಸುತ್ತಾರೆ ಎಂದು ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.
ಫೆ.18 ರಂದು ಉಪ್ಪಿನಂಗಡಿ ರೋಟರಿ ಸಮುದಾಯ ಭವನದಲ್ಲಿ ನಡೆದ ರೋಟರಿ ಕ್ಲಬ್ ಉಪ್ಪಿನಂಗಡಿಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಕ್ಲಬ್‌ನ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಜಯರಾಮ್ ರೈ ಮಾತನಾಡಿ, ನಾವು ಯಾರನ್ನಾದರೂ ಮಾತನಾಡಿಸುವಾಗ ಏನಾಯಿತು ಎಂದು ಕೇಳಿದಾಗ ಏನೂ ಇಲ್ಲ ಎಂದು ಪ್ರತ್ಯುತ್ತರ ಬಂದಾಗ ಅದರಲ್ಲಿ ಏನೋ ಇದೆ ಎಂದು ಸೂಚಿಸಿತ್ತಿರುವುದು ಅವರೇ ನಿಜವಾದ ಸ್ನೇಹಿತ. ಯಾವುದೇ ಸಂಸ್ಥೆಯನ್ನು ಮುನ್ನೆಡೆಸಬೇಕಾದರೆ ಅಲ್ಲಿ ಸದಸ್ಯರ ಅಭಿರುಚಿ ಎಂತಹುದು ಎಂದು ತಿಳಿದಾಗ ಸಂಸ್ಥೆಯು ಯಶಸ್ಸು ಪಡೆಯುತ್ತದೆ ಎಂದರು.
ರೋಟರಿ ವಲಯ ಸೇನಾನಿ ಶ್ರೀಮತಿ ಗ್ರೇಸಿ ಗೊನ್ಸಾಲ್ವಿಸ್ ಮಾತನಾಡಿ, ಪ್ರಸ್ತುತ ವರ್ಷದ ರೋಟರಿ ಧ್ಯೇಯ ರೋಟರಿ ಮ್ಯಾಜಿಕ್ ಎಂಬಂತೆ ಉಪ್ಪಿನಂಗಡಿ ರೋಟರಿಯು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ನಿಜಕ್ಕೂ ಮ್ಯಾಜಿಕ್ ಮಾಡಿದೆ. ಸರಕಾರಿ ಆಸ್ಪತ್ರೆಯಲ್ಲಿ ಚಿಣ್ಣರ ಪಾರ್ಕ್ ಮಾಡುವ ಮೂಲಕ ಮಕ್ಕಳಿಗೆ ಆಟವಾಡುವ ಅವಕಾಶ ಕಲ್ಪಿಸಿದೆ ರೋಟರಿ ಉಪ್ಪಿನಂಗಡಿ. ಸರ್ವಧರ್ಮರವರನ್ನು ಸೇರಿಸಿಕೊಂಡು ರೋಟರಿ ಉಪ್ಪಿನಂಗಡಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಕ್ಲಬ್ ಸದಸ್ಯರ ಮಕ್ಕಳಿಗೆ ಅಭಿನಂದನೆ:
ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆಗೈದ ಕ್ಲಬ್ ಸದಸ್ಯರ ಮಕ್ಕಳಾದ ಶಮಿಕಾ(ಕರಾಟೆ, ಭರತನಾಟ್ಯ), ಸಮೃದ್ಧ್ ರೈ(ಅಥ್ಲೆಟಿಕ್ಸ್), ಆಧ್ಯಾ ಪಿ.ಶೆಟ್ಟಿ(ಇನ್ಸೆಫ್ ರೀಜನೆಲ್ ಫೇರ್), ನಿರ್ವಿ ಎನ್.ಆರ್(ಅಬಾಕಸ್), ಮಾನ್ವಿ(ಬುಲ್ ಬುಲ್), ಜಿಯೋನ್ನಾ ಮಾಡ್ತಾ(ಬ್ಬೈನ್ ಟೆಸ್ಟ್), ಮೊಹಮ್ಮದ್ ನಶಾ(ವಾಲಿಬಾಲ್)ರವರುಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಹೇಮಲತಾ ನಾಯಕ್ ಅಭಿನಂದಿತರ ಹೆಸರನ್ನು ಓದಿದರು.
ರೋಟರಿ ಫೌಂಡೇಶನ್‌ಗೆ ಕ್ಲಬ್ ಸದಸ್ಯರ ಶೇ.ನೂರು ದೇಣಿಗೆಯ ಚೆಕ್‌ನ್ನು ಟಿಆರ್‌ಎಫ್ ಚೇರ್‌ಮ್ಯಾನ್ ಜಗದೀಶ್ ನಾಯಕ್‌ರವರು ಜಿಲ್ಲಾ ಗವರ್ನರ್‌ರವರಿಗೆ ಹಸ್ತಾಂತರಿಸಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಅನುರಾಧಾ ಆರ್.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನಿತಾ ಕ್ರಾಸ್ತಾ ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷ ನವೀನ್ ಬ್ರ್ಯಾಗ್ಸ್‌ರವರು ಸ್ವಾಗತಿಸಿ, ಕ್ಲಬ್ ಬೆಳವಣಿಗೆಯಲ್ಲಿ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನಿಯೋಜಿತ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ವಂದಿಸಿ, ಕ್ಲಬ್ ಕಾರ್ಯದರ್ಶಿ ಕೇಶವ ಪಿ.ಎಂ ವರದಿ ವಾಚಿಸಿದರು. ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ವಂದನಾ ಮುದಲಾಜೆ, ಸಾರ್ಜಂಟ್ ಎಟ್ ಆರ್ಮ್ಸ್ ಪುರಂದರ ಬಾರ್ಲ, ಕ್ಲಬ್ ಸರ್ವಿಸ್ ನಿರ್ದೇಶಕ ಅಬ್ದುಲ್ ರಹಿಮಾನ್ ಯೂನಿಕ್, ವೊಕೇಶನಲ್ ಸರ್ವಿಸ್ ನಿರ್ದೇಶಕ ರವೀಂದ್ರ ದರ್ಬೆ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಇಸ್ಮಾಯಿಲ್ ಇಕ್ಬಾಲ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ವಿಜಯಕುಮಾರ್ ಕಲ್ಲಳಿಕೆ, ಯೂತ್ ಸರ್ವಿಸ್ ನಿರ್ದೇಶಕ ಸ್ವರ್ಣೇಶ್ ಗಾಣಿಗ, ಚೇರ್‌ಮ್ಯಾನ್‌ಗಳಾದ ಮೊಹಮದ್ ಶಮೀರ್ ಬಿ(ಮೆಂಬರ್‌ಶಿಪ್), ಜಿ.ಜಗದೀಶ್ ನಾಯಕ್(ಟಿಆರ್‌ಎಫ್), ಶ್ರೀಕಾಂತ್ ಪಟೇಲ್(ಪಬ್ಲಿಕ್ ಇಮೇಜ್), ಅರುಣ್ ಕುಮಾರ್ ಕೆ(ಸಿಎಲ್‌ಸಿಸಿ/ವಿನ್ಸ್), ರಾಜೇಶ್ ದಿಂಡಿಗಲ್(ಜಿಲ್ಲಾ ಪ್ರಾಜೆಕ್ಟ್), ಡಾ.ಸುಪ್ರೀತ್ ನಿರಂಜನ್ ರೈ(ಪಲ್ಸ್ ಪೋಲಿಯೊ)ರವರು ಸಹಕರಿಸಿದರು. ಶಿಕ್ಷಕಿ ಲವೀನಾ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.
ಸೇವಾ ಕೊಡುಗೆಗಳು..
ಮೈಂದಡ್ಕ ಅಂಗನವಾಡಿ ಕೇಂದ್ರಕ್ಕೆ, ಬುಳೇರಿ ಮೊಗ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಫ್ಯೂರಿಫೈಯರ್, ಬುಳೇರಿ ಮೊಗ್ರು ಸರಕಾರಿ ಪ್ರೌಢಶಾಲೆಗೆ ಫ್ಯಾನ್ ಅನ್ನು ಜಿಲ್ಲಾ ಗವರ್ನರ್‌ರವರು ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಸುಭಾಷ್‌ನಗರ ಅಂಗನವಾಡಿಗೆ ಪೈಟಿಂಗ್ ಪ್ರಾಯೋಜಕತ್ವದ ವಹಿಸಿದ ಇಸ್ಮಾಯಿಲ್ ಇಕ್ಬಾಲ್, ಜಗದೀಶ್ ನಾಯಕ್, ಪೈಂಟರ್ ಮೋಹನ್‌ದಾಸ್ ಶೆಟ್ಟಿ, ಸಮುದಾಯ ಆರೋಗ್ಯ ಕೇಂದ್ರದ ಚಿಣ್ಣರ ಮೈದಾನಕ್ಕೆ ಸಲಕರಣೆಗಳ ಕೊಡುಗೆ ನೀಡಿದ ಅಬ್ದುಲ್ ರಹಿಮಾನ್ ಯೂನಿಕ್, ಅಂಡೆತ್ತಡ್ಕ ಶಾಲೆಗೆ ದಿನನಿತ್ಯದ ಅಸೆಂಬ್ಲಿಗೆ ಸೌಂಡ್ ಬಾಕ್ಸ್ ನೀಡಿ ಸಹಕರಿಸಿದ ಡಾ.ರಾಜಾರಾಂ ಕೆ.ಬಿ, ಅಧ್ಯಕ್ಷ ನವೀನ್ ಬ್ರ್ಯಾಗ್ಸ್, ಹಿರೇಬಂಡಾಡಿ ಶಾಲೆಯ ಮೂವರು ಫಲಾನುಭವಿ ವಿದ್ಯಾರ್ಥಿಗಳಿಗೆ ಸಹಾಯಧನ ನೀಡಿದ ಕಾರ್ಯದರ್ಶಿ ಕೇಶವ ಪಿ.ಎಂ, ರೋಟರಿ ಸಮುದಾಯ ಭವನಕ್ಕೆ ಮೂರು ಫ್ಯಾನ್‌ಗಳನ್ನು ನೀಡಿದ ಸ್ವರ್ಣೇಶ್ ಗಾಣಿಗರವರನ್ನು ಜಿಲ್ಲಾ ಗವರ್ನರ್‌ರವರು ಅಭಿನಂದಿಸಿದರು.
ರಿಕ್ಷಾ ಚಾಲಕಿಗೆ ಸನ್ಮಾನ..
ಧರ್ಮಸ್ಥಳದಲ್ಲಿ ರಿಕ್ಷಾ ಚಾಲನೆಯ ತರಬೇತಿ ಪಡೆದು ಕಳೆದ ಎರಡು ವರ್ಷಗಳಿಂದ ಉಪ್ಪಿನಂಗಡಿ ಪರಿಸರದಲ್ಲಿ ಆಟೋ ರಿಕ್ಷಾ ಚಾಲಕರಾಗಿ ದುಡಿಯುತ್ತಾ ಸ್ವಾವಲಂಬಿ ಜೀವನವನ್ನು ನಡೆಸುತ್ತಾ ಬಂದಿರುವ ಮಹಿಳಾ ರಿಕ್ಷಾ ಚಾಲಕಿ ಹೇಮಲತಾರವರನ್ನು ಕ್ಲಬ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಸನ್ಮಾನ ಸಂದರ್ಭ ಹೇಮಲತಾರವರ ಪತಿ ಸುದಾನ ಶಾಲೆಯ ಸೊಸೈಟಿ ಉದ್ಯೋಗಿ ಅನಿಲ್ ಎಚ್, ಪುತ್ರಿ ಧೃತಿರವರು ಉಪಸ್ಥಿತರಿದ್ದರು.
ಮೌನ ಪ್ರಾರ್ಥನೆ..
ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ಎರಡು ಅವಧಿಗೆ ಅಧ್ಯಕ್ಷರಾಗಿ ಜೊತೆಗೆ ರೋಟರಿ ಕ್ಲಬ್ ಉಪ್ಪಿನಂಗಡಿ ಸಮುದಾಯ ಭವನದ ಅಭಿವೃದ್ಧಿಗೆ ಶ್ರಮಿಸಿದ್ದು ಇತ್ತೀಚೆಗೆ ಅಗಲಿದ ಹಿರಿಯರಾದ ಜಾರ್ಜ್ ನೊರೊನ್ಹಾರವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.