ಪುತ್ತೂರು:ಪುತ್ತೂರು ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ(ಲ್ಯಾಂಪ್ಸ್) ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೆ. ಪೂವಪ್ಪ ನಾಯ್ಕ ಕುಂಞಕುಮೇರು ಹಾಗೂ ಉಪಾಧ್ಯಕ್ಷರಾಗಿ ಟಿ. ಅಪ್ಪಯ್ಯ ನಾಯ್ಕ ತಳೆಂಜಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಹಕಾರಿ ಸಂಘದ ಕಚೇರಿಯಲ್ಲಿ ಫೆ.19ರಂದು ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪೂವಪ್ಪ ನಾಯ್ಕ ಕೆ ಕುಂಞಕುಮೇರು ಇವರಿಗೆ ಪೂವಪ್ಪ ನಾಯ್ಕ ಎಸ್. ಸೂಚಕರಾಗಿ, ನೇತ್ರಾಕ್ಷರವರು ಅನುಮೋದಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಅಪ್ಪಯ್ಯ ನಾಯ್ಕರವರನ್ನು ಮಂಜುನಾಥ ಎನ್.ಎಸ್ ಸೂಚಕರಾಗಿ, ಧರ್ಣಪ್ಪ ನಾಯ್ಕ ಅನುಮೋದಿಸಿದ್ದರು. ನಿರ್ದೇಶಕರಾದ ಕರುಣಾಕರ ಟಿ.ಎನ್., ನಾರಾಯಣ ನಾಯ್ಕ, ಮಹಾಲಿಂಗ ಬಿ ನಾಯ್ಕ, ರಾಧಾ ಹೆಂಗ್ಸು ಹಾಗೂ ಜಯುಶ್ರೀ ಉಪಸ್ಥಿತರಿದ್ದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಚುನಾವಣಾಧಿಕಾರಿಯಾಗಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇಸಪ್ಪ ನಾಯ್ಕ ಹಾಗೂ ಸಿಬಂದಿಗಳು ಸಹಕರಿಸಿದರು.
ಅಧ್ಯಕ್ಷ ಪೂವಪ್ಪ ನಾಯ್ಕ ಕೆ.:
ಕೊಳ್ತಿಗೆ ಮಂಡಲ ಪಂಚಾಯತ್ ಮಾಜಿ ಸದಸ್ಯ , ಕಾವು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಿಎ ಬ್ಯಾಂಕ್ ಮಾಜಿ ನಿರ್ದೇಶಕ, ಕಾವು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ನಿರ್ದೇಶಕ, ಅರಿಯಡ್ಕ ಗ್ರಾ.ಪಂ ಮಾಜಿ ಸದಸ್ಯ, ಬಿಜೆಪಿ ಜಿಲ್ಲಾ ಎಸ್.ಟಿ ಮೋರ್ಚಾದ ಮಾಜಿ ಕಾರ್ಯದರ್ಶಿ, ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಮಾರಾಟಿ ಸಮಾಜ ಸೇವಾ ಉಪಾಧ್ಯಕ್ಷರಾಗಿ ಹಾಗೂ ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಲ್ಯಾಂಪ್ಸ್ನಲ್ಲಿ ಕಾವು ಮಾಡ್ನೂರು ಗ್ರಾಮದ ಕುಂಞಕುಮೇರು ನಿವಾಸಿಯಾಗಿರುವ ಪೂವಪ್ಪ ನಾಯ್ಕರವರು ಈ ಹಿಂದೆ ಸಂಘದಲ್ಲಿ 1995-1997 ತನಕ ಉಪಾಧ್ಯಕ್ಷರಾಗಿ, 1997-1999ಅಧ್ಯಕ್ಷರಾಗಿ, 1999-2000 ತನಕ ಅಧ್ಯಕ್ಷರಾಗಿ ಹಾಗೂ 2008-2010 ರ ತನಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಉಪಾಧ್ಯಕ್ಷ ಅಪ್ಪಯ್ಯ ನಾಯ್ಕ:
ಬಡಗನ್ನೂರು ಗ್ರಾಮದ ತಳೆಂಜಿ ನಿವಾಸಿಯಾಗಿರುವ ಅಪ್ಪಯ್ಯ ನಾಯ್ಕರವರು ಎರಡನೇ ಬಾರಿಗೆ ಲ್ಯಾಂಪ್ಸ್ನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇವರು ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ, ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿರುವ ಇವರು ಮರಾಟಿ ಸಮಾಜ ಸೇವಾ ಸಂಘದ ಬಡಗನ್ನೂರು ಗ್ರಾಮ ಸಮಿತಿ ಅಧ್ಯಕ್ಷರಾಗಿರುತ್ತಾರೆ.