ಪುತ್ತೂರು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿಯ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿಯಿಂದ ಶ್ರೀ ಸಂತ ಕವಿ ಸರ್ವಜ್ಞ ಜಯಂತಿ, ಛತ್ರಪತಿ ಶಿವಾಜಿ ಜಯಂತಿ ದಿನಾಚರಣೆ
ಪುತ್ತೂರು-ಬಯಂಬೆ ಬಿ. ನರಸಿಂಹ ರಾವ್‌ರವರ ಮನೆಯ ಎದುರಿನ ಗದ್ದೆಯಲ್ಲಿ ಸಂಜೆ ೬ರಿಂದ ಶ್ರೀ ದೇವಿ ಲಲಿತೋಪಾಖ್ಯಾನ ಯಕ್ಷಗಾನ
ರಾಮಕುಂಜ ಗ್ರಾ.ಪಂ ಕಚೇರಿ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
೩೪ ನೆಕ್ಕಿಲಾಡಿ ಗ್ರಾ.ಪಂ ಸಭಾಭವನ ದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಪಾಣಾಜೆ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦ಕ್ಕೆ ೩ನೇ ವಾರ್ಡ್, ೧೧ಕ್ಕೆ ೨ನೇ ವಾರ್ಡ್, ಅಪರಾಹ್ನ ೨ಕ್ಕೆ ೧ನೇ ವಾರ್ಡ್, ೩ಕ್ಕೆ ೪ನೇ ವಾರ್ಡ್‌ನ ವಾರ್ಡುಸಭೆ
ಕೆಲೆಂಬಿರಿ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಬೆಳಂದೂರು ಗ್ರಾ.ಪಂನ ಮಹಿಳಾ ಗ್ರಾಮಸಭೆ, ವಿಶೇಷಚೇತನರ ಸಮನ್ವಯ ಗ್ರಾಮಸಭೆ
ಬಿರುಮಲೆ ಬೆಟ್ಟ ಗಾಂಧಿ ಮಂಟಪದ ಎದುರು ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯಿಂದ ಅರಿಯಡ್ಕ ಚಿಕ್ಕಪ್ಪ ನಾಯ್ಕ್‌ರ ನವತಿ ಸಂಭ್ರಮದ ನೆನೆಪಿನ ಕೊಡುಗೆಯ ವೀಕ್ಷಣಾ ಮಂಟಪದ ಉದ್ಘಾಟನೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ಅಮ್ಮನವರ ದೇವಸ್ಥಾನದಲ್ಲಿ ಅಷ್ಟಮಿ ೧ನೇ ಮಖೆ ಕೂಟ, ರಾತ್ರಿ ೭ರಿಂದ ಭಕ್ತಿ ಗಾನ ವೈಭವ, ೮.೩೦ರಿಂದ ಬಲಿ ಹೊರಟು ಉತ್ಸವ, ರಥೋತ್ಸವ, ಬಲಿ, ಮಹಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ೧೦.೩೦ರಿಂದ ವಸಂತಿಯಕ್ಕ ಓಲೆರ್‌ಗೆ..? ತುಳು ನಾಟಕ
ಬಲ್ಯ ಗ್ರಾಮ ಶ್ರೀ ಕ್ಷೇತ್ರ ಬೀರುಕ್ಕುನಲ್ಲಿ ಬೆಳಿಗ್ಗೆ ೬ರಿಂದ ಶ್ರೀ ರಾಜನ್ ದೈವ ನೇಮೋತ್ಸವ, ಮಧ್ಯಾಹ್ನ ೧ರಿಂದ ಅನ್ನಸಂತರ್ಪಣೆ
ಪರ್ಪುಂಜ ಕೊಯಿಲತ್ತಡ್ಕ ಶಿವಕೃಪಾ ಆಡಿಟೋರಿಯಂ ವಠಾರದಲ್ಲಿ ಸಂಜೆ ದೇವತಾ ಪ್ರಾರ್ಥನೆ, ರಾಕ್ಷೆಘ್ನ ಹೋಮ, ವಾಸ್ತು ಪೂಜಾ ಬಲಿ, ಪ್ರಾಕಾರ ಬಲಿ
ಅರಿಯಡ್ಕ ಗ್ರಾಮದ ಅಮೈ ಪಯಂದೂರು ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ಬೆಳಿಗ್ಗೆ ೮ಕ್ಕೆ ಶ್ರೀ ಧೂಮಾವತಿ ದೈವದ ತಂಬಿಲ ಕೊಲ್ಲಾಜೆ ಗೋಳಿಯಲ್ಲಿ, ೧೦ಕ್ಕೆ ಶ್ರೀ ಕಿನ್ನಿಮಾಣಿ ದೈವದ ನೇಮ, ಸಂಜೆ ೪ಕ್ಕೆ ಶ್ರೀ ಪೂಮಾಣಿ ದೈವದ ನೇಮ, ರಾತ್ರಿ ಕುಣಿತ ಭಜನೆ, ಪಂಜುರ್ಲಿ, ಗುಳಿಗ ದೈವದ ನೇಮ
ಮಾಡನ್ನೂರು ಶಹೀದಿಯಾ ನಗರದಲ್ಲಿ ನುಸ್ರತುಲ್ ಇಸ್ಲಾಂ ಜಮಾಅತ್ ಕಮಿಟಿ ಮಾಡನ್ನೂರು ಸ್ವಲಾತ್ ವಾರ್ಷಿಕೋತ್ಸವದ ಪ್ರಯುಕ್ತ ಮಗ್ರಿಬ್ ನಮಾಝಿನ ಬಳಿಕ ಸ್ವಲಾತ್ ಮಜ್ಲಿಸ್, ಇಶಾ ನಮಾಝಿನ ಬಳಿಕ ಧಾರ್ಮಿಕ ಪ್ರವಚನ
ಮೇಗಿನಪೇಟೆಯ ವಿಟ್ಲ ಕೇಂದ್ರ ಜುಮಾ ಮಸೀದಿಯ ಮುಂಭಾಗದಲ್ಲಿ ವಿಟ್ಲ ಉರೂಸ್, ಧಾರ್ಮಿಕ ಮತಪ್ರವಚನ
ಮರ್ಧಾಳ ಬೆಥನಿ ಜೀವನ್ ಜ್ಯೋತಿ ವಿಶೇಷಚೇತನರ ಶಾಲೆಯಲ್ಲಿ ಸಂಜೆ ೫.೩೦ರಿಂದ ವಾರ್ಷಿಕೋತ್ಸವ
ಆನಡ್ಕ ಶಾಂತಿಗೋಡು ಹಿ.ಪ್ರಾ. ಶಾಲೆಯಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರ
ಉತ್ತರಕ್ರಿಯೆ
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಿಲ್ವಶ್ರೀ ಸಭಾಭವನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಪ್ರದೀಪ್ ರೈ ಕೇಕನಾಜೆಯವರ ಉತ್ತರಕ್ರಿಯೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯ ನೇತ್ರಾವತಿ ಸಮುದಾಯ ಭವನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಸೂಡಿಮುಳ್ಳು ರಾಮಕ್ಕೆ ರೈಯವರ ಉತ್ತರಕ್ರಿಯೆ