*ಲೋಕೇಶ್ ಹೆಗ್ಡೆಯವರಿಗೆ ಸನ್ಮಾನ
*ನನ್ನನ್ನು ಗೌರವಿಸುತ್ತೀರೆಂದು ಕನಸಿನಲ್ಲೂ ನೆನೆಸಿಲ್ಲ-ಲೋಕೇಶ್ ಹೆಗ್ಡೆ
ಪುತ್ತೂರು: ದೇಶದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬಿಜೆಪಿಯಿಂದ ಒಂದು ವರ್ಷಗಳ ಕಾಲ ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ವಾಜಪೇಯಿಯವರು ಪುತ್ತೂರು ಭೇಟಿ ಕಾರ್ಯಕ್ರಮಗಳಲ್ಲಿ ಭಾಗಹಿಸಿದವರಿಗೆ ಸನ್ಮಾನ ಕಾರ್ಯಕ್ರಮ ನಡೆಯುತ್ತಿದ್ದು, 1991ರಲ್ಲಿ ಪುತ್ತೂರಿನಲ್ಲಿ ವಾಜಪೇಯಿ ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾಜಿ ಪುರಸಭೆ ಅಧ್ಯಕ್ಷ ಯು ಲೋಕೇಶ್ ಹೆಗ್ಡೆ ದಂಪತಿಯನ್ನು ಪುತ್ತೂರು ಬಿಜೆಪಿಯಿಂದ ಫೆ.19ರಂದು ಉರ್ಲಾಂಡಿ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ನನ್ನನ್ನು ಗೌರವಿಸುತ್ತೀರೆಂದು ಕನಸಿನಲ್ಲೂ ನೆನೆಸಿಲ್ಲ :
ಸನ್ಮಾನ ಸ್ವೀಕರಿಸಿದ ಮಾಜಿ ಪುರಸಭೆ ಅಧ್ಯಕ್ಷ ಯು ಲೋಕೇಶ್ ಹೆಗ್ಡೆ ಮಾತನಾಡಿ, ವಾಜಪೇಯಿವರೊಂದಿಗೆ ಅಂದು ಜೊತೆಯಲ್ಲಿದ್ದು ಕೆಲಸ ಮಾಡಿರುವುದು ನಮ್ಮ ಕರ್ತವ್ಯ ಆಗಿತ್ತು. ಆದರೆ ಅವತ್ತು ನಾವಿದ್ದೇವೆಂದು ಗುರುತಿಸಿ ಇವತ್ತು ನನ್ನನ್ನು ಗೌರವಿಸುತ್ತೀರೆಂದು ನಾನು ಕನಸು ಮನಸ್ಸಿನಲ್ಲೂ ನೆನೆಸಿಲ್ಲ. ಯಾಕೆಂದರೆ ನಮಗೆ ಅವತ್ತು ಬೇರೆ ಯಾವುದು ಗೊತ್ತಿರಲಿಲ್ಲ. ಕೇವಲ ವಾಜಪೇಯಿ ಮಾತ್ರ ಗೊತ್ತಿತ್ತು ಎಂದ ಅವರು ಪುತ್ತೂರಿಗೆ ಬಂದಾಗ ವಾಜಪೇಯಿ ಒಡನಾಟವನ್ನು ವಿವರಿಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿದರು.
ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ತೆಂಕಿಲ, ನಾಗೇಶ್ ಪ್ರಭು, ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭಾ ಸದಸ್ಯರಾದ ವಿದ್ಯಾ ಗೌರಿ, ಸಂತೋಷ್ ಬೊಳುವಾರು, ಗೌರಿ ಬನ್ನೂರು, ಚಂದ್ರಶೇಖರ್ ರಾವ್ ಬಪ್ಪಳಿಗೆ, ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ಸತೀಶ್ ನಾಕ್ ಪರ್ಲಡ್ಕ, ನೀಲಂತ್ ಬೊಳುವಾರು, ನಾರಾಯಣ ಹೆಗ್ಡೆ, ವಿಶ್ವನಾಥ ಕುಲಾಲ್, ಕಾರ್ಯಕ್ರಮ ಸಂಚಾಲಕ ಯುವರಾಜ್ ಪೆರಿಯತ್ತೋಡಿ, ಸಹ ಸಂಚಾಲಕಿ ವಸಂತ ಲಕ್ಷ್ಮೀ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.