ಮನವಳಿಕೆ-1 ಅಂಗನವಾಡಿಯಲ್ಲಿ ಅಕ್ಷರ ಉತ್ಸಾಹ, ಸ್ವಚ್ಛ ಗ್ರಾಮ ನಿರ್ವಹಣೆ ಸಂವಾದ ಸಂಕಲ್ಪ, ಬಾಲಮೇಳ

0

ಪೆರಾಬೆ: ಪೆರಾಬೆ ಗ್ರಾಮದ ಮನವಳಿಕೆ-1 ಅಂಗನವಾಡಿ ಕೇಂದ್ರದಲ್ಲಿ ಅಕ್ಷರ ಉತ್ಸಾಹ ಮೇಳ, ಸ್ವಚ್ಛ ಗ್ರಾಮ ನಿರ್ವಹಣೆ ಸಂವಾದ ಸಂಕಲ್ಪ, ಬಾಲಮೇಳ ಕಾರ್ಯಕ್ರಮ ಫೆ.೨೦ರಂದು ನಡೆಯಿತು.


ಅಧ್ಯಕ್ಷತೆ ವಹಿಸಿದ್ದ ಜನಶಿಕ್ಷಣ ಟ್ರಸ್ಟ್‌ನ ಶೀನ ಶೆಟ್ಟಿಯವರು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಎರ್ಮಾಳ, ಪೆರಾಬೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಬೇಬಿ ಸಿ.ಪಾಟಾಳಿ, ಆಲಂಕಾರು ಕೆನರಾ ಬ್ಯಾಂಕ್‌ನ ಮೇನೇಜರ್ ಜೂನಾ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಜನಶಿಕ್ಷಣ ಟ್ರಸ್ಟ್‌ನ ಕೃಷ್ಣ ಮೂಲ್ಯ, ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ., ಸದಸ್ಯರಾದ ಮಮತಾ, ಸಿ.ಎಂ.ಫಯಾಜ್, ಅಂಗನವಾಡಿ ಹಿರಿಯ ಕಾರ್ಯಕರ್ತೆ ಜೈನಾಬಿ, ಬಾಲವಿಕಾಸ ಸಮಿತಿ ಅಧ್ಯಕ್ಷ ಸಂಜೀವ ರೈ ಪರಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಕೆನರಾ ಬ್ಯಾಂಕಿನ ಮ್ಯಾನೇಜರ್ ಜೂನಾ, ಪೆರಾಬೆ ಗ್ರಾ.ಪಂ. ಸ್ವಚ್ಛ ವಾಹಿನಿ ವಾಹನ ಚಾಲಕಿ ಯಶೋಧ, ಮಾದರಿ ಮಹಿಳೆ ಕುಸುಮಾ ಪಾಟಾಳಿ ಅವರನ್ನು ಸ್ತ್ರೀಶಕ್ತಿ ಗುಂಪಿನ ಸದಸ್ಯೆಯರು ಸನ್ಮಾನಿಸಿದರು. ಅಂಗನವಾಡಿಯ ಪುಟಾಣಿಗಳಿಗೆ, ಮಕ್ಕಳ ಪೋಷಕರಿಗೆ ಮತ್ತು ಸ್ತ್ರೀಶಕ್ತಿ ಗುಂಪಿನ ಸದಸ್ಯೆಯರಿಗೆ ಏರ್ಪಡಿಸಿದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಂಗನವಾಡಿಯ ಕಾರ್ಯಕರ್ತೆ ಮೋಹಿನಿ ಸ್ವಾಗತಿಸಿ, ವಂದಿಸಿದರು. ಪೆರಾಬೆ ಶಾಲಾ ಶಿಕ್ಷಕಿ ಹೇಮಲತಾ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


LEAVE A REPLY

Please enter your comment!
Please enter your name here