ಸತತ 6 ನೇ ಬಾರಿಗೆ ಅಧ್ಯಕ್ಷರಾಗಿ ಪದ್ಮನಾಭ ಬೋರ್ಕರ್ ಬಿ., ಉಪಾಧ್ಯಕ್ಷರಾಗಿ ಉಮೇಶ್ ರೈ ಗಿಳಿಯಾಲು ಅವಿರೋಧ ಆಯ್ಕೆ
ಪಾಣಾಜೆ : ಮುಂದಿನ 5 ವರ್ಷಗಳ ಅವಧಿಗೆ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಪದ್ಮನಾಭ ಬೋರ್ಕರ್ ಬಿ ಬ್ರಹ್ಮರಗುಂಡರವರನ್ನು ಪುನರಾಯ್ಕೆ ಹಾಗೂ ಉಪಾಧ್ಯಕ್ಷರಾಗಿ ಉಮೇಶ್ ರೈ ಗಿಳಿಯಾಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಫೆ 20 ರಂದು ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ನೂತನ ನಿರ್ದೇಶಕರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಅಧೀಕ್ಷಕ ಬಿ. ನಾಗೇಂದ್ರ ಚುನಾವಣಾಧಿಕಾರಿಯಾಗಿದ್ದರು
ನಿರ್ದೇಶಕರರಾದ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಸದಾಶಿವ ರೈ ಸೂರಂಬೈಲು, ಕುಮಾರ ನರಸಿಂಹ ಯು., ರಾಧಾಕೃಷ್ಣ ರೈ ಪಟ್ಟೆ, ಸುಧಕಾರ ಕೆ., ದಯಾನಂದ ಟಿ., ಹರೀಶ್ ಪೂಜಾರಿ ನೆಲ್ಲಿತ್ತಿಮಾರ್, ನಾಗೇಶ್ ಗೌಡ ಪುಳಿತ್ತಡಿ, ಪುಷ್ಪಾವತಿ ಅಪಿನಿಮೂಲೆ, ಚಂದ್ರಕಲಾ ಕೊಪ್ಪಳ ಹಾಗೂ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ವಲಯ ಮೇಲ್ವಿಚಾರಕರಾದ ವಸಂತ ಎಸ್ ಉಪಸ್ಥಿತರಿದ್ದರು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ಕುಮಾರ್ ಕೆ. ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಪದ್ಮನಾಭ ಬೋರ್ಕರ್ ಬಿ. ಪರಿಚಯ :
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಯಾಗಿರುವ ಪದ್ಮನಾಭ ಬೋರ್ಕರ್ ಬಿ., ನಿಡ್ಪಳ್ಳಿ ಗ್ರಾಮದ ಬ್ರಹ್ಮರಗುಂಡ ನಿವಾಸಿ ದಿl ಗೋಪಾಲಕೃಷ್ಣ ನಾಯಕ್ ಹಾಗೂ ರುಕ್ಮಿಣಿ ದೇವಿ ಪುತ್ರ. ಇವರು 1999 ರಿಂದ ಸತತ 26 ವರ್ಷಗಳ ಕಾಲ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಫದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಕೃಷಿಕರಾಗಿರುವ ಇವರು ಟಿ.ಎ.ಪಿ.ಸಿ.ಎಮ್.ಎಸ್ ಪುತ್ತೂರು ಇದರ ಅಧ್ಯಕ್ಷರಾಗಿ, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಪುತ್ತೂರು ಇದರ ಉಪಾಧ್ಯಕ್ಷರಾಗಿ ಮತ್ತು ಶ್ರೀ ಶಾಂತದುರ್ಗ ದೇವಸ್ಥಾನ ನಿಡ್ಪಳ್ಳಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಮತ್ತು ನಿಡ್ಪಳ್ಳಿ ಬಿ.ಜೆ.ಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶ್ರೀ ಶಾಂತದುರ್ಗ ದೇವಸ್ಥಾನ ನಿಡ್ಪಳ್ಳಿ ಇದರ ಆಡಳಿತ ಸಮಿತಿಯ ಕೋಶಾಧಿಕಾರಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಉಮೇಶ್ ರೈ ಗಿಳಿಯಾಲು ಪರಿಚಯ :
ಪಾಣಾಜೆ ಗ್ರಾಮದ ಗಿಳಿಯಾಲು ನಿವಾಸಿ ದಿl ಜತ್ತಪ್ಪ ರೈ ಹಾಗೂ ಮುತ್ತು ದಂಪತಿಯ ಪುತ್ರರಾದ ಉಮೇಶ್ ರೈ ಇವರು ಇದೇ ಮೊದಲ ಬಾರಿಗೆ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಗೊಂಡಿದ್ದು ಇದೀಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೃಷಿಕರಾಗಿರುವ ಇವರು ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ ಒಡ್ಯ,ಪಾಣಾಜೆ ಇದರ ಗೌರವಾಧ್ಯಕ್ಷರಾಗಿ, ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು, ಪಾಣಾಜೆ ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚುನಾವಣಾಧಿಕಾರಿಗೆ ಗೌರವಾರ್ಪಣೆ
ಚುನಾವಣಾಧಿಕಾರಿಯಾಗಿ ಸಹಕರಿಸಿದ ಬಿ. ನಾಗೇಂದ್ರ, ಅಧೀಕ್ಷಕರು, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಮಂಗಳೂರು ಉಪವಿಭಾಗ, ಇವರಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರುಗಳು ಹಾಗೂ ಸಿಬ್ಬಂದಿಗಳು ಗೌರವಾರ್ಪಣೆ ಸಲ್ಲಿಸಿದರು.