ಪುತ್ತೂರು : ಆದಿ ದ್ರಾವಿಡ ಸಮಾಜ ಸೇವಾ ಸಂಘ ಇದರ ಮಾಜಿ ಜಿಲ್ಲಾಧ್ಯಕ್ಷ , ನೆಹರುನಗರ ಕೆನರಾ ಬ್ಯಾಂಕ್ ಇದರ ಉದ್ಯೋಗಿ ಮೋಹನ್ ನೆಲ್ಲಿಗುಂಡಿಯವರ ತಾಯಿ , ಆರೋಗ್ಯ ಇಲಾಖೆಯ ನಿವೃತ್ತ ಉದ್ಯೋಗಿ ದಿ. ನಾರಾಯಣ ರವರ ಪತ್ನಿ ಲಕ್ಷ್ಮೀ (94.ವ) ಫೆ.19 ರಂದು ಸ್ವಗೃಹ ಬಪ್ಪಳಿಗೆ ನೆಲ್ಲಿಗುಂಡಿ ಮನೆಯಲ್ಲಿ ನಿಧನ ಹೊಂದಿದ್ದಾರೆ.
ಮೃತರು ಮಕ್ಕಳಾದ ಗಿರಿಜಾ ನೆಲ್ಲಿಗುಂಡಿ , ಆರೋಗ್ಯ ಇಲಾಖೆ ಬಂಟ್ವಾಳದಲ್ಲಿ ಉದ್ಯೋಗಿಯಾಗಿರುವ ಕೇಶವ ಬಿ ,ಸೇಸಮ್ಮ ಮಡಿಕೇರಿ ,ಶ್ಯಾಮಲಾ ನೆಲ್ಲಿಗುಂಡಿ ಹಾಗೂ ಪುತ್ತೂರು ನಗರಸಭೆಯಲ್ಲಿ ಉದ್ಯೋಗಿಯಾಗಿರುವ ಸರಸ್ವತಿ ಮತ್ತು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸದಾಶಿವ ಸಹಿತ ಅಳಿಯಂದಿರು,ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.