
ಪುತ್ತೂರು: ರೆಂಟಲ್ ಆ್ಯಂಡ್ ಸೇಲ್ಸ್ ಆಭರಣ ಮಳಿಗೆ ಶಾನ್ವಿ ಜ್ಯುವೆಲ್ಲರಿ ಸಂಸ್ಥೆ ಪುತ್ತೂರು ಮುಖ್ಯರಸ್ತೆಯ ಜಿ.ಎಲ್ ಆಚಾರ್ಯ ಮುಂಭಾಗದ ಸಿಪಿಸಿ ಕಾಂಪ್ಲೆಕ್ಸ್ ನಲ್ಲಿ ಫೆ.21ರಂದು ಶುಭಾರಂಭಗೊಂಡಿತು. ಮುಂಡೂರು ಸಂತೋಷ್ ಭಟ್ ರವರ ಪೌರೋಹಿತ್ಯದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಿತು.
ಮಾಲಕಿ ಮೇಘನಾ ದೀಪಕ್’ರವರ ತಂದೆ ನಾರಾಯಣ್, ತಾಯಿ ಲೀಲಾವತಿ ದಂಪತಿ ದೀಪ ಬೆಳಗಿಸಿ ಮಳಿಗೆ ಉದ್ಘಾಟಿಸಿ ಶುಭ ಹಾರೈಸಿದರು.
ಮಕ್ಕಳ ತಜ್ಞ ಡಾ| ಬಿ.ಮಂಜುನಾಥ ಶೆಟ್ಟಿ, ಶ್ರೀದೇವಿ ಸ್ಟೋರ್್ಸ’ನ ಮಾಲಕ ಸುಕುಮಾರ ಗೌಡ ಸೇರಿದಂತೆ ಹಲವಾರು ಮಿತ್ರರು ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.
ಸಂಸ್ಥೆಯ ಮಾಲಕರಾದ ಸುಶ್ಮಿತಾ ನಿಧಿನ್, ಮೇಘನಾ ದೀಪಕ್, ಸುಶ್ಮಿತಾರವರ ಪತಿ ನಿಧಿನ್, ಪುತ್ರಿ ಶಾನ್ವಿ, ತಂದೆ ಸತೀಶ್, ತಾಯಿ ವಿಲಾಸಿನಿ, ಸಹೋದರ ಸುದೇಶ್, ಮೇಘನಾರವರ ಪತಿ ದೀಪಕ್, ಪುತ್ರಿ ವ್ಯೋಮ್ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು.
ಸಂಸ್ಥೆ ಶುಭಾರಂಭದ ಪ್ರಯುಕ್ತ ಮೊದಲ 21 ಗ್ರಾಹಕರಿಗೆ 10%ರಿಯಾಯಿತಿ ದರ ಹಾಗೂ ನಮ್ಮಲ್ಲಿ ವಿಶಿಷ್ಟ ವಿನ್ಯಾಸದ ಪ್ರೀಮಿಯಂ ಗುಣಮಟ್ಟದ ಆಭರಣಗಳು, ನಿಮ್ಮ ಶೈಲಿಗೆ ತಕ್ಕ ಪರಿಪೂರ್ಣ ಆಯ್ಕೆ ಖರೀದಿ ಹಾಗೂ ಬಾಡಿಗೆಗೆ ಸೇವೆಗಳು ನಮ್ಮಲ್ಲಿ ಲಭ್ಯವಿದೆ.
ಸುಶ್ಮಿತಾ ನಿಧಿನ್ ಹಾಗೂ ಮೇಘನಾ ದೀಪಕ್
-ಮಾಲಕರು