ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೆದಂಬಾಡಿ ವಲಯದ ದೇವಿನಗರ ಕಾರ್ಯಕ್ಷೇತ್ರದ ಸಂತೋಷ್ ಸಂಘದ ಸದಸ್ಯರ ಮನೆಗೆ ಮಳೆಗಾಲದ ಸಂದರ್ಭದಲ್ಲಿ ಮರ ಬಿದ್ದು ಹಾನಿ ಉಂಟಾದಾಗ ಸದಸ್ಯರು ಎಲ್ಲಾ ದಾಖಲೆಗಳನ್ನು ಕೊಟ್ಟು ಅನುದಾನ ಬೇಡಿಕೆಯನ್ನು ಯೋಜನೆಗೆ ನೀಡಿದ್ದರು. ತಕ್ಷಣಕ್ಕೆ ಸ್ಪಂದಿಸಿದ ಯೋಜನಾಧಿಕಾರಿಯವರು ಮೇಲ್ವಿಚಾರಕರು ಖಾವಂದರಿಗೆ ಮನವಿ ಮಾಡಿಕೊಂಡು ರೂ.15000 ಮೊತ್ತದ ಅನುದಾನ ಬಿಡುಗಡೆ ಮಾಡಿಸಿದರು.
ಅನುದಾನವನ್ನು ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಶುಭವತಿ, ಒಕ್ಕೂಟ ಅಧ್ಯಕ್ಷರಾದ ಸುಜಯ ಕೆ, ಗ್ರಾಪಂ ಸದಸ್ಯೆ ಮಮತಾ ಎಸ್ ರೈ, ಸೇವಾ ಪ್ರತಿನಿಧಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಒಕ್ಕೂಟ ಅಧ್ಯಕ್ಷರು ಲಾಭಾಂಶ ವಿತರಣೆಯನ್ನು ಮಾಡಿದರು.