ಪುತ್ತೂರು: ಪಾಣಾಜೆ ಗ್ರಾಮದ ದೇವಸ್ಯ ಉದಯ ಕುಮಾರ್ ಮಣಿಯಾಣಿ ರವರ ಮನೆಯ ಮೇಲ್ಚಾವಣಿಯು ಸಂಪೂರ್ಣ ಶಿತಿಲಾವಸ್ಥೆಯಲ್ಲಿದ್ದು ವಾಸಕ್ಕೆ ಯೋಗ್ಯವಲ್ಲದ ಕಾರಣ ಈ ಮನೆಯ ದುರಸ್ತಿಯ ಕಾರ್ಯವನ್ನು ಅಟಲ್ ಜನ್ಮ ಶತಾಬ್ದಿಯ ಪ್ರಯುಕ್ತ ಪುತ್ತಿಲಪರಿವಾರ ಸೇವಾ ಟ್ರಸ್ಟ್ ವಹಿಸಿಕೊಳ್ಳುವ ಸಂಕಲ್ಪ ಮಾಡಿದೆ.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಸೇವೆಯ ಮೂಲಕ ಅಟಲ್ ಜನ್ಮ ಶತಾಬ್ದಿಯನ್ನು ಅರ್ಥಪೂರ್ಣ ಮಾಡುವ ಸಂಕಲ್ಪ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು, ನೆಕ್ಕಿಲಾಡಿ ಪಂಚಾಯತ್ ಮಾಜಿ ಅದ್ಯಕ್ಷ ಪ್ರಶಾಂತ್ ನೆಕ್ಕಿಲಾಡಿ, ಬಿಜೆಪಿ ಎಸ್,ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಜಿತ್ ಕಜೆ, ಪಾಣಾಜೆ ಬಿಜೆಪಿ ಶಕ್ತಿಕೇಂದ್ರ ಸಂಚಾಲಕ ಪ್ರೇಮ್ ರಾಜ್ ಆರ್ಲಪದವು, ಬಿಜೆಪಿ ಮಂಡಲ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ ಪ್ರದೀಪ್ ಪಾಣಾಜೆ, ಪಾಣಾಜೆ ಬಿಜೆಪಿ ಬೂತ್ ಪ್ರಮುಖರುಗಳಾದ ಪುಷ್ಪರಾಜ ರೈ ಕೋಟೆ, ಸಂದೀಪ್ ಕೆ. ಕೀರ್ತಿರಾಜ್ ಉಡ್ಡಂಗಳ, ಪಾಣಾಜೆ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹರೀಶ್ ಕಡಮಾಜೆ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸದಸ್ಯರುಗಳಾದ ವಸಂತ ಕುಮಾರ್ ಭರಣ್ಯ, ಸುಖಿನ್ ರಾಜ್ ಪಾಣಾಜೆ, ಜಾನು ನಾಯ್ಕ ಭರಣ್ಯ, ಮುಂತಾದ ಪ್ರಮುಖರು ಮನೆಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಪರಿಶೀಲಿಸಿದ್ದಾರೆ.