ಉಪ್ಪಳಿಗೆ; ಅಮೃತವರ್ಷಿಣಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

0

ನಿಡ್ಪಳ್ಳಿ;ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಬೆಟ್ಟಂಪಾಡಿ ವಲಯದ  ಅಮೃತವರ್ಷಿಣಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ಉಪ್ಪಳಿಗೆ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಫೆ.23 ರಂದು ನಡೆಯಿತು.

ದ. ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಇರ್ದೆ – ಉಪ್ಪಳಿಗೆ ಶಾಲಾ ಮುಖ್ಯ ಗುರು ಲಿಂಗಮ್ಮ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ನಿವೃತ್ತ ಶಿಕ್ಷಕ ದೇವಪ್ಪ ಯುರವರು ಮಾತನಾಡಿ, ಮೊಬೈಲ್ ಬಳಕೆಯ ಒಳಿತು -ಕೆಡುಕು ಮತ್ತು ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಹೇಗಿರಬೇಕು ಎಂಬ ಬಗ್ಗೆ  ತಿಳಿಸಿದರು. ತಾಲೂಕು ಯೋಜನಾಧಿಕಾರಿ ಶಶಿಧರ್ ರವರು ಯೋಜನೆಯ ಪರಿಕಲ್ಪನೆಯ ಬಗ್ಗೆ ಮತ್ತು ಒಬ್ಬ ವ್ಯಕ್ತಿಗೆ ಶಕ್ತಿ ನೀಡಿದರೆ ಪರಿವರ್ತನೆ ಸಾಧ್ಯ ಎಂದು ತಿಳಿಸಿದರು.

ವೇದಿಕೆಯಲ್ಲಿ  ಪ್ರಗತಿ ಬಂದು ಸ್ವಸಹಾಯ ಸಂಘಗಳ ವಲಯಾಧ್ಯಕ್ಷ ಬಾಲಕೃಷ್ಣ, ಗುಮ್ಮಟಗದ್ದೆ ಒಕ್ಕೂಟದ ಅಧ್ಯಕ್ಷ ಹರೀಶ್ ಗೌಡ, ಅಜಲಡ್ಕ ಒಕ್ಕೂಟದ ಅಧ್ಯಕ್ಷ ಚನಿಯಪ್ಪ ನಾಯ್ಕ  ಮತ್ತು ಇರ್ದೆ ಉಪ್ಪಳಿಗೆ ಶಾಲೆಯ ಎಸ್. ಡಿ. ಎಂ. ಸಿ ಅಧ್ಯಕ್ಷ ಲೋಕನಾಥ ಆಚಾರ್ಯರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಸದಸ್ಯೆ ಲೀಲಾವತಿ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 ಜಯಂತಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಆಟೋಟದ ಸ್ಪರ್ಧೆಯ  ಬಹುಮಾನವನ್ನು ಗಣ್ಯರಿಂದ  ವಿತರಿಸಲಾಯಿತು. ಶಾಲಾ ಮಕ್ಕಳಿಂದ ಮತ್ತು ಕೇಂದ್ರದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಒಕ್ಕೂಟದ ಪದಾಧಿಕಾರಿಗಳು ಒಕ್ಕೂಟದ ಸದಸ್ಯರು ಜ್ಞಾನವಿಕಾಸ ಕೇಂದ್ರ ಸದಸ್ಯರು ಉಪಸ್ಥಿತರಿದ್ದರು.

 ರಂಜಿನಿ, ಹೇಮಾವತಿ ಪ್ರಾರ್ಥಿಸಿದರು. ಪ್ರೇಮ ಸ್ವಾಗತಿಸಿದರು.ವಲಯ ಮೆಲ್ವೀಚಾರಕ ಸೋಹನ್ ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಪ್ರತಿನಿಧಿ ಭಾರತಿ ಉಪ್ಪಳಿಗೆ ವಂದಿಸಿದರು.ತಾಲೂಕು ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರದ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here