ಪುತ್ತೂರು: ಕೆದಂಬಾಡಿ ಗ್ರಾಮದ ಸಾರೆಪುಣಿ-ಕೋರಿಕ್ಕಾರು ರಸ್ತೆ ಕಾಮಗಾರಿಗೆ 2ಕೋಟಿ ರೂ.ಅನುದಾನವನ್ನು ಕರ್ನಾಟಕ ನೀರಾವರಿ ಇಲಾಖೆಯ ಮೂಲಕ ಶಾಸಕ ಅಶೋಕ್ ಕುಮಾರ್ ರೈಯವರು ಮಂಜೂರು ಮಾಡಿಸಿದ್ದು, ಕಾಮಗಾರಿಗೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪಕ್ಷ ಬೇಧ ಬಿಟ್ಟು ಅನುದಾನವನ್ನು ಸಮಾನಾಂತರವಾಗಿ ವಿತರಿಸಲಾಗಿದೆ. ಗ್ರಾಮದ ಅಭಿವೃದ್ಧಿಯೇ ಮುಖ್ಯವಾಗಿದ್ದು ಅಭಿವೃದ್ದಿಯ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯಗಳು ದೊರೆಯಬೇಕು ಎಂಬುದೇ ನಮ್ಮ ಗುರಿಯಾಗಿದೆ. ಕಾಮಗಾರಿಗಳು ಒಳ್ಳೆಯ ರೀತಿಯಲ್ಲಿ ನಡೆಯಲಿ ಎಂದು ಹೇಳಿದರು. ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರು ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೆಯ್ಯೂರು ವಲಯ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು, ಒಳಮೊಗ್ರು ವಲಯ ಕಾಂಗ್ರೆಸ್ ಅಶೋಕ್ ಪೂಜಾರಿ ಬೊಳ್ಳಾಡಿ, ಕೆಯ್ಯೂರು ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ, ಗ್ಯಾರಂಟಿ ಸಮಿತಿ ಸದಸ್ಯರುಗಳಾದ ಅಸ್ಮಾ ಗಟ್ಟಮನೆ, ವಿಜಯಲಕ್ಷ್ಮೀ ಪುತ್ತೂರು, ಕೆದಂಬಾಡಿ ಗ್ರಾಪಂ ಸದಸ್ಯ ಮೆಲ್ವಿನ್ ಮೊಂತೆರೋ, ಬ್ಲಾಕ್ ಸಂಘಟನಾ ಕಾರ್ಯದರ್ಶಿ ರೇಷ್ಮಾ ಮೆಲ್ವಿನ್, ಅಶೋಕ್ ರೈ ದೇರ್ಲ, ಅಬೂಬಕ್ಕರ್ ಸಾರೆಪುಣಿ, ಶೇಖರ ರೈ ಕುರಿಕ್ಕಾರ, ಇಬ್ರಾಹಿಂ ಬೆದ್ರಗುರಿ, ಕಾಂಗ್ರೆಸ್ ಕಾರ್ಯಕರ್ತ ನೌಶಾದ್ ತಿಂಗಳಾಡಿ, ರಫೀಕ್ ತ್ಯಾಗರಾಜೆ, ೧೮೫ ೧ನೇ ಬೂತ್ ಕಾರ್ಯದರ್ಶಿ ಹಾರೀಶ್ ಬೋಳೋಡಿ, ೨ನೇ ಬೂತ್ ಕಾರ್ಯದರ್ಶಿ ತಾರಾನಾಥ ರೈ ಕುಯ್ಯಾರು ೧೮೮, ೪ನೇ ಬೂತ್ ಕಾರ್ಯದರ್ಶಿ ಸೋಮಯ್ಯ ತಿಂಗಳಾಡಿ, ರಾಮಣ್ಣ ರೈ ಕೋರಿಕ್ಕಾರು, ಇಸ್ಮಾಯಿಲ್ ನೂಜಿ, ವಿವೇಕ್ ರೈ ಕುರಿಕ್ಕಾರ, ಪದ್ಮನಾಭ ರೈ ಕೋರಿಕ್ಕಾರು, ಜಯಪ್ರಕಾಶ್ ರೈ ಕೋರಿಕ್ಕಾರು, ತಾರಾನಾಥ ರೈ ಕುರಿಕ್ಕಾರ, ಪ್ರಶಾಂತ್ ರೈ ಕುರಿಕ್ಕಾರ, ಅಣ್ಣು ನಾಯ್ಕ ಕೋರಿಕ್ಕಾರು, ಸುಧಾಕರ ಪಾಟಾಳಿ ಕೋರಿಕ್ಕಾರು, ನಮಿತಾ ರೈ ಕುರಿಕ್ಕಾರ, ಸದಾಶಿವ ರೈ ಪಯಂದೂರು, ವಸಂತ ಗೌಡ ಪಯಂದೂರು, ವಿಠಲ ಪೂಜಾರಿ ಕೋರಿಕ್ಕಾರು, ರವೀಂದ್ರನಾಥ ಪೂಜಾರಿ ಕೋರಿಕ್ಕಾರು, ಜಗನ್ನಾಥ ಶೆಟ್ಟಿ ಪಯಂದೂರು, ಚಂದ್ರಶೇಖರ ರೈ ಪಯಂದೂರು, ಮೋನಪ್ಪ ಪೂಜಾರಿ ಕೊಂಬರಡ್ಕ, ಸದಾಶಿವ ಕೋರಿಕ್ಕಾರು, ಪ್ರೇಮಾ ನಿರಾಲ, ಅಕ್ಷಿತ್ ನಿರಾಲ, ಸುಭಾಷ್ ಸಾರೆಪುಣಿ, ವಿಜಯಲಕ್ಷ್ಮೀ ಕುರಿಕ್ಕಾರ, ಅಂತಪ್ಪ ಪೂಜಾರಿ ಕುರಿಕ್ಕಾರ, ಎ.ಕೆ ಅಬ್ದುಲ್ ಖಾದರ್ ಮೇರ್ಲ, ಮುಸ್ತಾಫ ಗಟ್ಟಮನೆ, ಬಶೀರ್ ಕೌಡಿಚ್ಚಾರು, ಹೈದರ್ ಗಟ್ಟಮನೆ, ಆಲಿಕುಂಞ ಗಟ್ಟಮನೆ, ಮಹಮ್ಮದ್ ನೆಲ್ಯಾಡಿ, ಶರೀಫ್ ಕಾಟ್ರಾಸ್, ವಾರಿಜಾ ರೈ, ಅಫ್ನಾನ್ ಕುರಿಕ್ಕಾರ, ಯಾಕೂಬ್ ತೋಟ, ಇಸ್ಮಾಯಿಲ್ ಬೋಳೋಡಿ, ಬಾಲಕೃಷ್ಣ ರೈ ಕುಂಬ್ರ, ವಸಂತ ತಿಂಗಳಾಡಿ, ಇಂಜಿನಿಯರ್ ಅಶ್ರಫ್, ಹಮೀದ್ ಗಟ್ಟಮನೆ ಸೇರಿದಂತೆ ವಲಯ ಪದಾಧಿಕಾರಿಗಳು, ಬೂತ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಲಯ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರು ಸ್ವಾಗತಿಸಿ, ವಲಯ ಕಾರ್ಯದರ್ಶಿ ಅಶ್ರಫ್ ಸಾರೆಪುಣಿ ವಂದಿಸಿದರು.
ಗ್ರಾಮಕ್ಕೆ 3ಕೋಟಿ 20 ಲಕ್ಷ ರೂ.ಅನುದಾನ
ಅಶೋಕ್ ಕುಮಾರ್ ರೈಯವರು ಶಾಸಕರಾದ ಬಳಿಕ ಕೆದಂಬಾಡಿ ಗ್ರಾಮಕ್ಕೆ ವಿವಿಧ ಕಾಮಗಾರಿಗಳಿಗೆ ರೂ.೩ ಕೋಟಿ ೨೦ ಲಕ್ಷ ಅನುದಾನ ಈಗಾಗಲೇ ಬಿಡುಗಡೆಗೊಂಡಿದೆ. ಇದರಲ್ಲಿ ಈಗಾಗಲೇ ೧ ಕೋಟಿ ೨೦ ಲಕ್ಷ ರೂ.ಕಾಮಗಾರಿ ಮುಗಿದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನ ಗ್ರಾಮಕ್ಕೆ ಬಿಡುಗಡೆಗೊಳ್ಳಲಿದೆ. ಈ ನಿಟ್ಟಿನಲ್ಲಿ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.
- ಪುರಂದರ ರೈ ಕೋರಿಕ್ಕಾರು, ಅಧ್ಯಕ್ಷರು ಕೆದಂಬಾಡಿ ವಲಯ ಕಾಂಗ್ರೆಸ್