ಪುತ್ತೂರು:ಕುರಿಯ ಗ್ರಾಮದ ಇಡಬೆಟ್ಟುವಿನಲ್ಲಿ ಸಂಸದರು, ಮಾಜಿ ಸಂಸದರಿಗೆ ಅಭಿನಂದನೆ ಸಲ್ಲಿಸಿ ಅಳವಡಿಸಲಾಗಿದ್ದ ಫ್ಲೆಕ್ಸ್ ಗೆ ಕಿಡಿಗೇಡಿಗಳು ಹಾನಿಗೊಳಿರುವ ಘಟನೆ ಫೆ.23ರಂದು ನಡೆದಿದೆ.
ನೈತ್ತಾಡಿ-ಇಡಬೆಟ್ಟು ರಸ್ತೆಗೆ ನಳಿನ್ ಕುಮಾರ್ ಕಟೀಲು ಸಂಸದರಾಗಿದ್ದ ಅವಧಿಯಲ್ಲಿ ರೂ.5 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಅದರ ಕಾಂಕ್ರಿಟೀಕರಣ ಕಾಮಗಾರಿಯೂ ಪೂರ್ಣಗೊಂಡಿತ್ತು.ಅನುದಾನ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸಿ, ಸಮಸ್ತ ನಾಗರಿಕರು ಹಾಗೂ ಕುರಿಯ ಶಕ್ತಿ ಕೇಂದ್ರದಿಂದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಹಾಲಿ ಸಂಸದ ಕ್ಯಾ|ಬ್ರಿಜೇಶ್ ಚೌಟ ಹಾಗೂ ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹಾಗೂ ಪ್ರಧಾನಿ ಮೋದಿಯವರ ಭಾವಚಿತ್ರವಿರುವ ಬ್ಯಾನರ್‌ನ್ನು ಇಡಬೆಟ್ಟುವಿನಲ್ಲಿ ಮೂರು ದಿನಗಳ ಹಿಂದೆ ಅಳವಡಿಸಲಾಗಿತ್ತು.ಫೆ.23ರಂದು ಈ ಬ್ಯಾನರ್‌ನ್ನು ಕಿಡಿಗೇಡಿಗಳು ಹರಿದು ಹಾನಿಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.