ಪುತ್ತೂರು: ಎಪಿಎಂಸಿ ರಸ್ತೆಯಲ್ಲಿರುವ ಸುದ್ದಿ ಅರಿವು ಕೃಷಿ ಕೇಂದ್ರದ ವತಿಯಿಂದ ಉದ್ಯೋಗಾಂಕ್ಷಿಗಳಿಗೆ ಹಾಗೂ ಸ್ವಂತ ಉದ್ಯಮ ಮಾಡುವವರಿಗೆ ಉದ್ಯಮಶೀಲತೆ, ಅಭಿವೃದ್ಧಿ ವಿಶೇಷ ಮಾಹಿತಿ ಕಾರ್ಯಾಗಾರ ಮತ್ತು ದಾಖಲಾತಿ ಜೋಡಣೆ, ಉದ್ಯಮ ಪ್ರಾರಂಭಿಸಲು ಬೇಕಾದ ಅಂತಿಮ ಯೋಜನೆ ತಯಾರಿ ಬಗ್ಗೆ ಪ್ರಾತ್ಯಕ್ಷಿತೆ ಫೆ.25ರಂದು ನಡೆಯಿತು. ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಮಾಹಿತಿ ನೀಡಿದರು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಸಿಬ್ಬಂದಿಗಳಾದ ಶಿವಕುಮಾರ್, ರಾಕೇಶ್ ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ಕಡಬ, ಸುಮತಿ ರಾಮಕುಂಜ, ಹರಿಶ್ಚಂದ್ರ ಪಕ್ಕಳ, ಪ್ರಸಾದ್ ಪುತ್ತೂರು, ಫ್ಲೋಸ್ಸಿ ಪ್ರಿಯ ಸಾಮೆತ್ತಡ್ಕ, ರಕ್ಷಾ ರೈ ಮಾಡವು, ಕಾವ್ಯ ಮೊಟ್ಟೆತಡ್ಕ ಭಾಗವಹಿಸಿದರು. ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಯಿತು. ಅರಿವು ಕೃಷಿ ವಿಭಾಗದ ಹರಿಣಾಕ್ಷಿ ಸ್ವಾಗತಿಸಿ, ವಂದಿಸಿದರು. ರಕ್ಷಾ ಸಹಕರಿಸಿದರು.