ಪುತ್ತೂರು:ನಗರಸಭೆಯಿಂದ ರೂ.25ಲಕ್ಷ ವೆಚ್ಚದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಚರಂಡಿ ಕಾಮಗಾರಿಗೆ ಫೆ.26ರಂದು ಶಿಲಾನ್ಯಾಸ ನೆರವೇರಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ ನಗರಸಭೆ ಅಭಿವೃದ್ಧಿ ಕೆಲಸದಲ್ಲಿ ನಮ್ಮೊಂದಿಗೆ ಸದಾ ಕೈಜೋಡಿಸುತ್ತಿರುವುದು ಸಂತೋಷದ ವಿಚಾರ. ಇವತ್ತು ಚರಂಡಿ ವ್ಯವಸ್ಥೆಗೆ ಶಿಲಾನ್ಯಾಸ ನೆರವೇರಿಸಿದ್ದು, ಜಾತ್ರೆಯೊಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ ಎಂದರು. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮತ್ತು ಸದಸ್ಯ ಕೆ.ಜೀವಂಧರ್ ಜೈನ್ ಅವರು ಶುಭ ಹಾರೈಸಿದರು. ಈ ಸಂದರ್ಭ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ, ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಇಂದಿರಾ ಆಚಾರ್ಯ, ಮನೋಹರ್ ಕಲ್ಲಾರೆ, ವಿದ್ಯಾ ಗೌರಿ, ಪ್ರೇಮಲತಾ ಜಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಭಾಶ್ ರೈ ಬೆಳ್ಳಿಪ್ಪಾಡಿ, ಈಶ್ವರ ಬೇಡೆಕರ್, ವಿನಯ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಶಾಸಕರ ಬೇಡಿಕೆಯಂತೆ ಕೆರೆ ಅಭಿವೃದ್ಧಿಗೆ ರೂ.3 ಕೋಟಿ, ಬಿರುಮಲೆಗೆ
ಸೀಮೆ ದೇವಸ್ಥಾನವಾದ ಮಹಾಲಿಂಗೇಶ್ವರ ದೇವಸ್ಥಾನ ನಮ್ಮನ್ನು ಎಲ್ಲಾ ರೀತಿಯಲ್ಲಿ ಕಾಪಾಡಿಕೊಂಡು ಬಂದಿರುವ ಹಿನ್ನಲೆಯಲ್ಲಿ ದೇವಸ್ಥಾನಕ್ಕೆ ನಗರಸಭೆಯಿಂದ ಕಿಂಚಿತ್ ಸೇವೆ ಆಗಬೇಕೆನ್ನುವ ನಿಟ್ಟಿನಲ್ಲಿ ಸೇವೆ ಮಾಡಿದ್ದೇವೆ. ನಮಗೆ ರೂ. 4 ಕೋಟಿ ಪಾರ್ಕ್ ನಿರ್ಮಾಣಕ್ಕೆ ಬಂದಿತ್ತು. ಆದರೆ ಪಾರ್ಕ್ಗೆ ನಗರಸಭೆ ನಿಧಿಯಿಂದ ಅನುದಾನ ಇಡಲಾಗಿದೆ. ಹಾಗಾಗಿ ಶಾಸಕರ ಬೇಡಿಕೆಯಂತೆ ನಗರಸಭೆಯಿಂದ ರೂ. 3 ಕೋಟಿಯನ್ನು ದೇವಳದ ಕೆರೆ ಅಭಿವೃದ್ಧಿಗೆ, ರೂ. 70ಲಕ್ಷವನ್ನು ಬಿರುಮಲೆ ಬೆಟ್ಟ ಅಭಿವೃದ್ದಿಗೆ ಇಟ್ಟು ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸುವ ಕೆಲಸ ಆಗಿದೆ.
ಕೆ.ಜೀವಂಧರ್ ಜೈನ್
ಸದಸ್ಯರು ನಗರಸಭೆ