ಆಲಂಕಾರು: ಪೆರಾಬೆ ಗ್ರಾಮದ ಮನವಳಿಕೆ ಗುತ್ತು ಕುಟುಂಬದ ಮನೆಯಲ್ಲಿ ಗಣಹೋಮ, ಶ್ರೀದುರ್ಗಾಪೂಜೆ, ಶ್ರೀ ಹರಿಸೇವೆ, ನಾಗತಂಬಿಲ ಮತ್ತು ಶ್ರೀ ಧರ್ಮದೈವ ಧೂಮಾವತೀ ಬಾವನ ಮತ್ತು ರಕ್ತೇಶ್ವರೀ ದೈವಗಳ ನೇಮ ಹಾಗೂ ಶ್ರೀನಾಗಬ್ರಹ್ಮ ಸನ್ನಿಧಿಯಲ್ಲಿ ಪೂಜೆ ಶ್ರೀ ಬ್ರಹ್ಮ ಬೈದೇರುಗಳ ನೇಮೋತ್ಸವ ಮಾ.2ರಿಂದ ಮಾ.5ರವರೆಗೆ ನಡೆಯಲಿದೆ.

ಮಾ.2ರಂದು ಬೆಳಿಗ್ಗೆ ಗಣಹೋಮ, ರಾತ್ರಿ ದುರ್ಗಾಪೂಜೆ ನಡೆದು ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ. ಮಾ.3ರಂದು ಬೆಳಿಗ್ಗೆ ಶ್ರೀಹರಿ ಸೇವೆ, ನಾಗತಂಬಿಲ ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಸ್ಥಾನದಲ್ಲಿ ಶುದ್ಧಿ ಕಲಶ, ರಾತ್ರಿ ಶ್ರೀಧರ್ಮದೈವ ಧೂಮಾವತೀ ಬಾವನ ರಕ್ತೇಶ್ವರೀ ದೈವಗಳಿಗೆ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆದು ಬಳಿಕ ಧರ್ಮದೈವ ಧೂಮಾವತೀ ಬಾವನ ನೇಮೋತ್ಸವ ನಡೆಯಲಿದೆ.
ಮಾ.4.ರಂದು ಬೆಳಿಗ್ಗೆ ರಕ್ತೇಶ್ವರೀ ಶಿರಾಡಿ ದೈವಗಳ ನೇಮೋತ್ಸವ, ಸಂಜೆ ಪಂಜುರ್ಲಿ ಕಲ್ಲುರ್ಟಿ ಹಾಗು ಸತ್ಯದೇವತೆ ನೇಮೋತ್ಸವ ನಡೆದು ಅನ್ನಸಂತರ್ಪಣೆ ನಡೆಯಲಿದೆ.
ಮಾ5.ರಂದು ಬೆಳಿಗ್ಗೆ ದೈಯ್ಯೊಂಕುಳು, ಚಕ್ರವರ್ತಿ ಕೊಡಮಣಿತ್ತಾಯ ಹಾಗೂ ಇತರ ದೈವಗಳ ನೇಮೋತ್ಸವ ನಡೆದು ಸಂಜೆ ಶ್ರೀಬೈದೇರುಗಳ ಭಂಡಾರ ತೆಗೆದು ರಾತ್ರಿ ಶ್ರೀನಾಗಬ್ರಹ್ಮ ಸನ್ನಿಧಿಯಲ್ಲಿ ಪೂಜೆ ನಡೆದ ಬಳಿಕ ಅನ್ನಸಂತರ್ಪಣೆಯಾಗಿ ಬಳಿಕ ಶ್ರೀಬೈದೇರುಗಳ ನೇಮೋತ್ಸವ ನಡೆಯಲಿದೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಅಗಮಿಸಿ ದೈವ ದೇವರ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆಯಲ್ಲಿ ಪಾಲ್ಗೊಳ್ಳುವಂತೆ ಮನವಳಿಕೆ ಗುತ್ತಿನ ಯಾಜಮಾನ ರಮಾನಾಥ ರೈ, ದೈವ ದೇವರುಗಳ ಟ್ರಸ್ಟ್ ನ ಅಧ್ಯಕ್ಷರು ಹಾಗು ವ್ಯವಸ್ಥಾಪಕರಾದ ದಯಾನಂದ ರೈ ಮನವಳಿಕೆ, ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಠಲ ರೈ ಮನವಳಿಕೆ, ಕಾರ್ಯದರ್ಶಿ ಜಯರಾಜ್ ರೈ, ವ್ಯವಸ್ಥಾಪಕರಾದ ಗೋಪಾಲಕೃಷ್ಣ ರೈ ಮನವಳಿಕೆ, ಗಣೇಶ ರೈಮನವಳಿಕೆ ಹಾಗು ಮನವಳಿಕೆ ಗುತ್ತಿನ ಕುಟುಂಬಸ್ಥರು,ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.