ಪೆರಾಬೆ: ಗ್ರಾ.ಪಂ.ಮಹಿಳಾ ಗ್ರಾಮಸಭೆ ಫೆ.27ರಂದು ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ.,ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲೂಕು ಕಾನೂನು ಪ್ರಾಧಿಕಾರದ ಪ್ಯಾರಾಲೀಗಲ್ ವ್ಯಾಲೆಂಟೈನ್ ಸುಮಂಗಲರವರು ಮಾಹಿತಿ ನೀಡಿ, ಮಕ್ಕಳಿಗೆ ಉತ್ತಮ ಸಂಸ್ಕೃತಿಯಲ್ಲಿ ಬೆಳೆಸುವ ಜವಾಬ್ದಾರಿ ತಾಯಂದಿರದ್ದಾಗಿದೆ. ಮಹಿಳೆಯರು ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಬೆಳೆಯಬೇಕೆಂದು ಹೇಳಿದರು.
ಆರೋಗ್ಯ ಇಲಾಖೆಯ ರಮ್ಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಗ್ರಂಥಾಲಯ ಮೇಲ್ವಿಚಾರಕಿ ಜಯಕುಮಾರಿ ಅವರು ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಮಮತಾ, ಮೋಹಿನಿ, ಕಾವೇರಿ, ಲೀಲಾವತಿ, ಮೇನ್ಸಿ, ಬಿ.ಕೆ.ಕುಮಾರ್, ಸಿ.ಎಂ.ಫಯಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಶಾಲಿನಿ ಸ್ವಾಗತಿಸಿ, ವಂದಿಸಿದರು.