





ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ನಟರಾಜ ವೇದಿಕೆಯಲ್ಲಿ ದ.ಕ. ಉಡುಪಿ ಉಭಯ ಜಿಲ್ಲೆಯ ಅಖಿಲ ಭಾರತ ಸಂಗೀತ ಮತ್ತು ನೃತ್ಯ ಕಲಾವಿದರ ಒಕ್ಕೂಟದಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿವಿಧ ಶಾಖೆಗಳ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರಸ್ತುತಿ ನಡೆಯಿತು. ಸಂಸ್ಥೆಯ ಹಿರಿಯ ಕಲಾವಿದೆ ಅಪೂರ್ವ ಗೌರಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಸಂಸ್ಥೆಯ ಸಂಚಾಲಕಿ ಶಶಿಪ್ರಭಾ ಮತ್ತು ವಿದ್ಯಾರ್ಥಿ ಕಲಾವಿದರಿಗೆ ಕಾರ್ಯಕ್ರಮದ ಸಂಘಟಕರಾದ ಸಾಯಿನಾರಾಯಣ್ ಕಲ್ಲಡ್ಕ ಮತ್ತು ಕೃಷ್ಣಗೋಪಾಲ್ ಪೂಂಜಾಲಕಟ್ಟೆಯವರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು.








