ಎಸ್.ಎಸ್.ಎಲ್.ಸಿ , ಪಿ.ಯು.ಸಿ , ಪದವಿ ಅರ್ಹತೆಯನ್ನು ಹೊಂದಿರುವ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಅವಕಾಶ
ಶಿಕ್ಷಣ” ಜೀವನ ವಿಕಾಸದ ಸಮಾನಾರ್ಥಕ ಪದ. ಬದುಕಿನಲ್ಲಿ ಪ್ರತಿಯೊಂದು ಅನುಭವವು ಶಿಕ್ಷಣವೆಂದೇ ಹೇಳಬಹುದು. ವ್ಯಕ್ತಿಯ ಚಾರಿತ್ರ್ಯ, ವ್ಯಕ್ತಿತ್ವ, ಸಂಸ್ಕೃತಿ ,ಚಿಂತನೆ, ತಿಳುವಳಿಕೆ, ಕೌಶಲ್ಯಗಳು, ಹವ್ಯಾಸಗಳು, ಹಾಗೂ ಜೀವನದಲ್ಲಿ ಅನುಭವಕ್ಕೆ ಬರುವ ಸಣ್ಣ ಸಣ್ಣ ವಿಚಾರಗಳೂ ಸಹ ಶಿಕ್ಷಣದ ಮೇಲೆ ಅವಲಂಬಿಸಿರುತ್ತದೆ. ಶಿಕ್ಷಣ ಒಂದು ಪ್ರಕ್ರಿಯೆ. ಇದರ ಮೂಲಕ ಮಾನವನು ಮೊದಲು ಶಿಶುವಾಗಿ ಸರ್ವ ರೀತಿಯಿಂದಲೂ ವಿಕಸಿತ ಹೊಂದಿ ಸಮಾಜದಲ್ಲಿ ಒಂದು ಉಪಯುಕ್ತ ಸ್ಥಾನ ಪಡೆಯುತ್ತಾನೆ. ಶಿಕ್ಷಣ ಮಾಧ್ಯಮದ ಮೂಲಕ ಸಾವಿರಾರು ವರ್ಷಗಳಿಂದ ಸಮಾಜದಿಂದ ಪಡೆದ ಅನುಭವಗಳನ್ನು ಮಗುವಿಗೆ ಹಸ್ತಾಂತರ ಮಾಡಲಾಗುತ್ತದೆ. ಶಿಕ್ಷಣ ಒಂದು ಸಂಸ್ಕಾರ ಪ್ರಕ್ರಿಯೆ. ಮಗು ತನಗರಿವಿಲ್ಲದೆ ಸಮಾಜದ ಎಲ್ಲಾ ಕಡೆಗಳಿಂದಲೂ ಸಂಸ್ಕಾರ ಪಡೆಯುತ್ತಿರುತ್ತದೆ. ಕೇವಲ ಶಿಕ್ಷಣ ಸಂಸ್ಥೆಗಳು ಮಾತ್ರ ಮನುಷ್ಯರನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಇಂದು ಸಂಸ್ಕಾರದ ಬಹಳಷ್ಟು ಭಾಗ ಶಿಕ್ಷಣ ಸಂಸ್ಥೆಗಳಿಂದ ಹೊರಗಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ಬಾಹ್ಯ ವಾತಾವರಣ ಎರಡು ಸಂಸ್ಕಾರಯುಕ್ತವಾಗಬೇಕು. ಇದು ವ್ಯತ್ಯಾಸವಾದರೆ ಮಕ್ಕಳು ದ್ವಂದ್ವದಲ್ಲಿ ಸಿಲುಕುತ್ತಾರೆ. ಸಂಸ್ಕಾರ ದೃಷ್ಟಿಯಲ್ಲಿ ಹೊಂದಾಣಿಕೆಯಾದಾಗ ವ್ಯಕ್ತಿ ಮತ್ತು ಸಮಾಜದ ಸರ್ವತೋಮುಖ ಏಳಿಗೆಯಾಗುತ್ತದೆ. ಇಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಜ್ಞಾನವು ಪವಿತ್ರತಮ” ವಾದುದು.`ನಾಸ್ತಿ ವಿದ್ಯಾಸಮಂ ಚಕ್ಷುಃ”. ಶಿಕ್ಷಣವನ್ನು ಕೇವಲ ಜ್ಞಾನಾರ್ಜನೆ ಎಂದು ತಿಳಿಯದೆ ಬದುಕನ್ನು ರೂಪಿಸುವ ಒಂದು ಅವಿಭಾಜ್ಯ ಅಂಗವೆಂದು ತಿಳಿದು ಸೇವೆ, ತ್ಯಾಗದ ,ಶ್ರದ್ಧೆಯಿಂದ ವಿದ್ಯಾದಾನ ಮಾಡುವ ಶಿಕ್ಷಕರ ಅಗತ್ಯ ಇಂದು ಅಗತ್ಯವಿದೆ. ಬೆಳೆವ ಸಿರಿ ಮೊಳಕೆಯಲ್ಲಿ ಎಂಬ ಮಾತಿಗೆ ಪೂರಕವಾಗಿ ಶಿಶು ಶಿಕ್ಷಣದಲ್ಲಿ ಮಕ್ಕಳಿಗೆ ಸರಿದಾರಿ ತೋರುವ ಆಚರಣೆಯಲ್ಲಿ ಬರಿಯ ಉಪದೇಶದಲ್ಲಿ ಏನು ಫಲವಿಲ್ಲ ಕೈ ಹಿಡಿದು ನಡೆಸುವವರಿಗೆ ಪಥವು ತಿಳಿದಿರಬೇಕು. ತಪ್ಪು ಹೆಜ್ಜೆಯು ಸಲ್ಲ ಎಂಬಂತ ಶಿಕ್ಷಕರು ಬೇಕಾಗಿದೆ. ಈ ಉದ್ದೇಶದಿಂದ ವಿವೇಕಾನಂದ ವಿದ್ಯಾವರ್ಧಕ ಸಂಘವು ವಿವೇಕಾನಂದ ನರ್ಸರಿ ಶಿಕ್ಷಕರ ತರಬೇತಿ ಅಕಾಡೆಮಿಯನ್ನು ಪ್ರಾರಂಭಿಸುತ್ತಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಇಂದು 3 ರಿಂದ 6 ವರ್ಷದವರೆಗೆ ಮಗು ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಇಂದು ವಿವೇಕಾನಂದ ವಿದ್ಯಾವರ್ಧಕ ಸಂಘವು ಅನೇಕ ಶಿಶು ಮಂದಿರಗಳನ್ನು, ನರ್ಸರಿ ತರಗತಿಗಳನ್ನು ನಡೆಸುತ್ತಿದೆ. ವಿದ್ಯಾಭಾರತಿಯ ಶಿಶು ಶಿಕ್ಷಣದ ದ್ಯೇಯದೊಂದಿಗೆ, ನರ್ಸರಿ ಶಿಕ್ಷಕರ ತರಬೇತಿಯು ಇಂದು ಅಧಿಕೃತವಾಗಿ ಶಿಕ್ಷಕರಿಗೆ ಅವಶ್ಯಕವೆಂಬುದನ್ನು ಮನಗಂಡು ವಿವೇಕಾನಂದ ವಿದ್ಯಾವರ್ಧಕ ಸಂಘವು ತೆಂಕಿಲದಲ್ಲಿ ಒಂದು ವರ್ಷದ (ಶಿಶು ಶಿಕ್ಷಣ) ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸ್ ಆರಂಭಿಸುವ ಉದ್ದೇಶ ಹೊಂದಿದೆ.
ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಯೋಜನಾ ಆಯೋಗದ ಮುಖಾಂತರ ಭಾರತ್ ಸೇವಕ್ ಸಮಾಜ್ BSSಮೂಲಕ NTTC ಯನ್ನು ಆರಂಭಿಸುತ್ತಿದೆ. ಎಸ್.ಎಸ್.ಎಲ್.ಸಿ , ಪಿ.ಯು.ಸಿ , ಪದವಿ ಅರ್ಹತೆಯನ್ನು ಹೊಂದಿರುವ ಆಸಕ್ತ ವಿದ್ಯಾರ್ಥಿನಿಯರು, ಮಹಿಳೆಯರು, ಈ ತರಬೇತಿಯನ್ನು ಪಡೆಯಬಹುದಾಗಿದೆ. ಈ ತರಬೇತಿಯನ್ನು ಪಡೆದವರು ಶಿಶುಮಂದಿರ, L K G , U K G ಗಳಲ್ಲಿ ಶಿಕ್ಷಕರಾಗಿಯೂ , ಸ್ವತಃ ಬೇಬಿ ಸಿಟ್ಟಿಂಗ್, ನರ್ಸರಿ ಶಾಲೆಗಳನ್ನು ತೆರೆಯಬಹುದಾಗಿದೆ.
ಆಸಕ್ತರು ದಾಖಲಾತಿಗಾಗಿ ಸಂಪರ್ಕಿಸಿ
ದೂರವಾಣಿ ಸಂಖ್ಯೆ :9448297281 | 08251 – 238355