ಪುತ್ತೂರು: ಮಾ.7 ರಿಂದ 9ರ ತನಕ ತೆಂಕಿಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗು ಗುಳಿಗ, ಕೊರಗ ತನಿಯ ದೈವಸ್ಥಾನದಲ್ಲಿ ಜರುಗಲಿರುವ ದೈವಗಳ ವಾರ್ಷಿಕ ನೇಮೋತ್ಸವಕ್ಕೆ ಫೆ.28ರಂದು ಗೊನೆಮುಹೂರ್ತ ನೆರವೇರಿಸಲಾಯಿತು.
ಬೆಳಿಗ್ಗೆ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಗೊನೆ ಮುಹೂರ್ತ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ತೆಂಕಿಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ಅಧ್ಯಕ್ಷ ಲೋಹಿತ್ ತೆಂಕಿಲ, ಕಾರ್ಯದರ್ಶಿ ಗಣೇಶ್ ಟಿ ತೆಂಕಿಲ, ಕೋಶಾಧಿಕಾರಿ ಸುರೆಂದ್ರ ಟಿ ಕಮ್ನಾರು, ಗೌರವಾದ್ಯಕ್ಷ ಬಾಬು ಕಮ್ನಾರ್, ಸದಸ್ಯರಾದ ಕೇಶವ, ಶ್ರೀಧರ, ಅಕ್ಷಯ್, ಅಜಯರ್, ಪ್ರಶಾಂತ್, ನಾಗೇಶ್, ಮೋನಪ್ಪ, ಹರೀಶ್, ಚಿದಾನಂದ, ಪ್ರತಾಪ್, ಪ್ರದೀಪ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಅಜ್ಜನಿಗೆ ಬೆಳ್ಳಿಯ ಗೋಂಪರ್ ಸಮರ್ಪಣೆ
ಕಾರಣಿಕ ದೈವ ಕೊರಗಜ್ಜನಿಗೆ ಬೆಳ್ಳಿಯ ಗೋಂಪರ್ ಸಮರ್ಪಣೆಯ ಮೆರಣಿಗೆಯು ಮಾ.7ರಂದು ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ತೆಂಕಿಲ ಗರಡಿಯ ತನಕ ನಡೆಯಲಿದೆ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.