ಪುತ್ತೂರು: ಸ್ವರ ಮಾಧುರ್ಯ ಸಂಗೀತ ಬಳಗದ ಸಾರಥ್ಯದಲ್ಲಿ ಪ್ರಜ್ಞಾ ಮತ್ತು ಅಜಿತ್ ಕುಮಾರ್ ಗೋಳಿತೊಟ್ಟು ಇವರ ನಿರ್ಮಾಣದಲ್ಲಿ, ಕಾವ್ಯಶ್ರೀ ಗಡಿಯಾರ ಮತ್ತು ಬಾಲ ಪ್ರತಿಭೆ ಸೋನಿಕಾ ಜನಾರ್ದನ್ ಇವರ ಮಧುರ ಕಂಠದಲ್ಲಿ ಮೂಡಿ ಬಂದಿರುವ ಇತಿಹಾಸ ಪ್ರಸಿದ್ಧ ಗೆಜ್ಜೆಗಿರಿ ಕ್ಷೇತ್ರದ ಕುರಿತು “ಗೆಜ್ಜೆಗಿರಿತ ಅಮರ್ ಬೊಳ್ಳಿಲು” ತುಳು ವೀಡಿಯೋ ಆಲ್ಬಂ ಹಾಡು ಮಾ.2ರಂದು :ಪೂರ್ವಾಹ್ನ 11.30 ಗಂಟೆಗೆ ಗೆಜ್ಜೆಗಿರಿ ಕ್ಷೇತ್ರದಲ್ಲಿ ಬಿಡುಗಡೆಗೊಳ್ಳಲಿದೆ.
ಇದೇ ಸಂದರ್ಭದಲ್ಲಿ ಸೋನಿಕ ಜನಾರ್ದನ್ ಮತ್ತು ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಪಡೆಯಲಿದೆ. ವಿಡಿಯೋ ಆಲ್ಬಂ ಸಾಂಗ್ ಗೆ ಜನಾರ್ದನ್ ಪುತ್ತೂರು ಸಾಹಿತ್ಯ, ರಾಗ ಸಂಯೋಜನೆ ಸವಿತಾ ಅವಿನಾಶ್ ಪುತ್ತೂರು ನೀಡಿದ್ದು, ಹಿನ್ನಲೆ ಸಂಗೀತ ಮತ್ತು ರೆಕಾರ್ಡಿಂಗ್ ಅಶ್ವಿನ್ ಬಾಬಣ್ಣ ಸವಿ ಸಂಗೀತ್ ಸ್ಟುಡಿಯೋ ಪುತ್ತೂರು, ವಿಡಿಯೋ ಎಡಿಟಿಂಗ್ ಸಂಗೀತ ಪುತ್ತೂರು, ಮಾಧ್ಯಮ ಸಹಕಾರ ಸಿ.ಶೇ. ಕಜೆಮಾರ್ ನೀಡಿದ್ದಾರೆ. ಪದ್ಮರಾಜ್ ಪೂಜಾರಿ ಕೋಶಾಧಿಕಾರಿ ಶ್ರೀ ಗೋರ್ಣನಾಥೇಶ್ವರ ಕ್ಷೇತ್ರ ಕುದ್ರೋಳಿ, ರವಿ ಪೂಜಾರಿ ಚಿಲಿಂಬಿ ಅಧ್ಯಕ್ಷರು ಗೆಜ್ಜೆಗಿರಿ ಕ್ಷೇತ್ರ, ಜಯಂತ ನಡುಬೈಲು ಗೌರವ ಅಧ್ಯಕ್ಷರು ಗೆಜ್ಜೆಗಿರಿ ಕ್ಷೇತ್ರ, ದೀಪಕ್ ಕೋಟ್ಯಾನ್ ಉಪಾಧ್ಯಕ್ಷರು ಗೆಜ್ಜೆಗಿರಿ ಕ್ಷೇತ್ರ, ಡಾ. ರವಿ ಕಕ್ಕೆಪದವು, ಸಮಾಜ ಸೇವಕರು,ಆರ್.ಸಿ ನಾರಾಯಣ್ ರೆಂಜ, ಸಾಮಾಜಿಕ ಮುಖಂಡರು ಇವರುಗಳ ಸಂಪೂರ್ಣ ಸಹಕಾರದಲ್ಲಿ ಈ ಆಲ್ಬಂ ಹಾಡು ಮೂಡಿಬಂದಿದೆ. 5ರ ಹರೆಯದ ಪುಟ್ಟ ಬಾಲೆ ಸೋನಿಕಾ ಜನಾರ್ದನ್ ಈ ಹಾಡಿಗೆ ಧ್ವನಿ ನೀಡಿದ್ದು ವಿಶೇಷವಾಗಿದೆ. ಇವರು ಈಗಾಗಲೇ ಹಲವು ಕಡೆಗಳಲ್ಲಿ ಭಕ್ತಿ ಸಂಗೀತ ಗಾಯನ ನೀಡಿದ್ದಾರೆ.