ಪರ ಊರಿನಲ್ಲಿರುವ ಪುತ್ತೂರಿನವರು – ಅಬುದಾಬಿಯ ಇಂಡಿಯನ್ ಸ್ಕೂಲ್ ಶಿಕ್ಷಕಿ ಲೀನಾ ಡಿ’ಸೋಜ ಸೇವಾ ನಿವೃತ್ತಿ

0

ಪುತ್ತೂರು: ಅಬುದಾಬಿಯ ಇಂಡಿಯನ್ ಸ್ಕೂಲ್‌ನ ಶಿಕ್ಷಕಿ ಲೀನಾ(ಮಸ್ಕರೇನ್ಹಸ್) ಡಿಸೋಜಾರವರು ತಮ್ಮ 34 ವರ್ಷಗಳ ಸೇವೆಯ ಬಳಿಕ ಫೆ.28ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.

ಲೀನಾ ಡಿ’ಸೋಜರವರು1990ರಲ್ಲಿ ಆಂಗ್ಲ ಭಾಷಾ ಶಿಕ್ಷಕಿಯಾಗಿ ವೃತ್ತಿ ಪ್ರಾರಂಭಿಸಿ ಅವರು ಮಧ್ಯಮ ವಿಭಾಗದ ವಿಷಯ ಸಂಯೋಜಕರಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದರು. ಶಿಕ್ಷಕರಾಗಿ, “ಗ್ರಾಫಿಕ್ ನೊವೆಲ್” ತರಗತಿಯನ್ನು ಪರಿಚಯಿಸಿ ಹೊಸ ಕಲಿಕೆ ವಿಧಾನಗಳನ್ನು ಪರಿಚಯಿಸಿದರು. ಸ್ಪರ್ಧೆಗಳಾದ ಕ್ವಿಜ್, ತ್ರಿಭಾಷಾ ಸ್ಪರ್ಧೆಗಳು, ಸ್ಪೆಲ್ಲಿಂಗ್ ಬೀ, ಡಿಕ್ಲಾಮೇಶನ್, ಪೊಲಿಗ್ಲಾಟ್ ಮುಂತಾದಲ್ಲಿ ವಿದ್ಯಾರ್ಥಿಗಳನ್ನು ತರಬೇತಿ ನೀಡಿರುತ್ತಾರೆ. ಇಂಟರ್-ಹೌಸ್ ಗಾಯನ ಸ್ಪರ್ಧೆಗಳು, ಕ್ರಿಸ್ಮಸ್ ಕ್ಯಾರೋಲ್ ಮುಂತಾದ ಸಂಗೀತ ಕಾರ್ಯಕ್ರಮಗಳಲ್ಲೂ ಅವರು ನಿರ್ವಹಿಸಿದ ಪಾತ್ರ ಸ್ಮರಣೀಯ. ಅವರ ಅನನ್ಯ ಸೇವೆಯನ್ನು ಶಾಲೆಯು ಗೌರವಿಸಿ ಮೆರವಣಿಗೆ ಮೂಲಕ ಅವರನ್ನು ಬೀಳ್ಕೊಡಲಾಗಿತ್ತು. ಲೀನಾ (ಮಸ್ಕರೇನ್ಹಸ್) ಡಿ’ಸೋಜರವರು ಮೂಲತ ಪುತ್ತೂರಿನವರಾಗಿದ್ದು, ಪುತ್ತೂರು ಸಂತ ಫಿಲೋಮಿನಾ ಪ್ರೌಢ ಶಾಲೆಯಲ್ಲಿ 5 ವರ್ಷ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here