ಹಿರಿಯರ ಸಾಧನೆ ಇಂದಿನ ಮಕ್ಕಳಿಗೆ ಸ್ಫೂರ್ತಿಯಾಗಲಿ:: ಬಿ ಇ ಒ ಲೋಕೇಶ್ಎಸ್ ಆರ್
ಪುತ್ತೂರು: ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು,”ಅನೇಕ ಮಹಾನ್ ವಿಜ್ಞಾನಿಗಳ ವೈಜ್ಞಾನಿಕ ಕೊಡುಗೆಗಳು ನಮಗೆ ಮಾದರಿಯಾಗಿದೆ. ಅಂತೆಯೇ ಇಂದಿನ ವಿದ್ಯಾರ್ಥಿಗಳು ಕೂಡ ಪ್ರಸ್ತುತ ಸಮಾಜಕ್ಕೆ ಒಳಿತಾಗುವಂತಹ ಕೊಡುಗೆಗಳನ್ನು ಕೊಡುವ ವಿಜ್ಞಾನಿಗಳಾಗಲೀ” ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಮೂಹ ಸಂಪನ್ಮೂಲ ಅಧಿಕಾರಿ ಪ್ರಸಾದ್ ಕೆವಿಎಲ್ಎನ್ ಅವರು, “ಪರಿಸರ ಸಂರಕ್ಷಣೆಯ ಕಡೆಗೆ ಮಹತ್ವ ಕೊಟ್ಟು, ನಮ್ಮ ವೈಜ್ಞಾನಿಕ ಸಂಶೋಧನೆಗಳು ಪರಿಸರ ರಕ್ಷಣೆಯ ಉದ್ದೇಶದಿಂದ ಕೂಡಿರಲಿ” ಎಂದು ಶುಭ ಹಾರೈಸಿದರು. ಎಸ್ ಡಿ ಎಂ ಸಿ ಅಧ್ಯಕ್ಷೆ ಸುಲೋಚನಿ ಇವರು ಮಾತನಾಡಿ, ” ಮಕ್ಕಳಿಂದ ಹೊಸ ಸಂಶೋಧನೆಗಳು ಮೂಡಿಬರುವಂತಾಗಲಿ” ಎಂದು ಶುಭ ಹಾರೈಸಿದರು.
ವಿಜ್ಞಾನ ನಾಟಕ ಹಾಗೂ ವಿಜ್ಞಾನ ಮಾದರಿ ಪ್ರದರ್ಶನ: ಕಾರ್ಯಕ್ರಮದಲ್ಲಿ ಮಕ್ಕಳಿಂದ ಪೋಷಕಾಂಶಗಳ ಮಹತ್ವವನ್ನು ಸಾರುವ “ನಮ್ಮ ಆಹಾರ ನಮ್ಮ ಆರೋಗ್ಯ” ಕಿರು ನಾಟಕ ಹಾಗೂ ವಿದ್ಯಾರ್ಥಿಗಳಿಂದ ವಿವಿಧ ವಿಜ್ಞಾನದ ಮಾದರಿಗಳ ಪ್ರದರ್ಶನ ನಡೆಯಿತು. ಸುಮಾರು 50 ಕ್ಕಿಂತಲೂ ಹೆಚ್ಚಿನ ಮಾದರಿಗಳು ಗಮನ ಸೆಳೆಯಿತು.
ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಇಸ್ಮಾಯಿಲ್ ಬೊಳುವಾರು ಇವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಹಿರಿಯ ಶಿಕ್ಷಕಿ ಗಂಗಾವತಿ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಶಿಕ್ಷಕ ಕೆ.ಕೆ ಮಾಸ್ಟರ್ ಇವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಶಿಕ್ಷಕಿ ಮಮತಾ ಇವರು ವಂದಿಸಿ, ವನಿತಾ ಇವರು ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ಶಿಕ್ಷಕಿ ಗಾಯತ್ರಿ ಹಾಗೂ ಮಮತಾ ಮತ್ತು ಗಣಿತ ಶಿಕ್ಷಕಿ ವಂದನ ಇವರು ಕಾರ್ಯಕ್ರಮ ಸಂಯೋಜಿಸಿದರು. ಶಿಕ್ಷಕರು ಸಹಕರಿಸಿದರು.