ಪುತ್ತೂರು: ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಿ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಗೀತಾಂಜಲಿ ಕೆ.ಸಿ ಪ್ರೌಢಶಾಲಾ ಕ್ರೀಡಾ ಶಿಕ್ಷಕಿ ಕೊಂಬೆಟ್ಟು ಅವರು ಮಂಗಳವಾರ ಹೆಚ್ ಪಿ ಆರ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆದ ವಾರ್ಷಿಕಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ್ನಡುಬೈಲು ಅವರು ಗೆದ್ದವರು ಹಿಗ್ಗದೆ ಸೋತವರು ಕುಗ್ಗದೆ ಕ್ರೀಡೆಯಲ್ಲಿ ಮುಂದುವರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಇವ್ನೀಸ್ಆಗ್ನೆಸ್ಡಿಸೋಜಾ, ಉಪಪ್ರಾಂಶುಪಾಲರಾದ ಜಲಜ ಎಸ್.ಎ, ಅಕ್ಷಯ ಕಾಲೇಜಿನ ದೈಹಿಕ ಶಿಕ್ಷಕರಾದ ನವೀನ್ ಹಾಗೂ ವಿದ್ಯಾರ್ಥಿ ಕ್ರೀಡಾ ಕಾರ್ಯದರ್ಶಿ ಆಶಿಕ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ರಾಜ್ಯ ಮಟ್ಟದ ಆಟಗಾರ ಜಗದೀಶ್ ಕ್ರೀಡಾಜ್ಯೋತಿಯನ್ನು ಬೆಳಗಿಸಿ ಮುಖ್ಯ ಅತಿಥಿಯಾದ ಜಯಂತ್ನಡುಬೈಲು ಅವರಿಗೆ ಹಸ್ತಾಂತರಿಸಿದರು. ನಂತರ ಕ್ರೀಡಾಪಟು ಆಶಿಕ್ ಪ್ರತಿಜ್ಞಾವಿಧಿ ಭೋದಿಸಿದರು. ವಿದ್ಯಾರ್ಥಿನಿ ರೂಪಶ್ರೀ ಸ್ವಾಗತಿಸಿ, ಮಿಶ್ರಿಯಾ ವಂದಿಸಿದರು. ಸಜಿನಾ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು.