ಮಾ.2: ಪಡುಮಲೆ ದ್ವಿತೀಯ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ

0

ಬಡಗನ್ನೂರು : ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರ ಹಾಗೂ ಪರಿವಾರ ದೇವರುಗಳ ಪ್ರತಿಷ್ಠಾ ವರ್ಧಂತ್ಯುತ್ಸವವು ವೇ.ಮೂ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ವೇ.ಮೂ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.2 ರಂದು ಜರಗಲಿರುವುದು.

ಕಾರ್ಯಕ್ರಮಗಳು
ಮಾ.2 ರಂದು ಪೂರ್ವಾಹ್ನ ಗಂ 7 ರಿಂದ 12 ತೆಂಗಿನಕಾಯಿ ಗಣಪತಿ ಹೋಮ, ಗಣಹೋಮದ ಪೂರ್ಣಾಹುತಿ,  ಶ್ರೀ ದೇವರಿಗೆ ನವಕಾಭಿಷೇಕ, ಶ್ರೀ ರಾಜರಾಜೇಶ್ವರಿ ದೇವಿಗೆ ಕಲಶಾಭಿಷೇಕ ಮತ್ತು ವಿಶೇಷ ಪೂಜೆ,ಬಳಿಕ ನಾಗ ತಂಬಿಲ ಮತ್ತು ಗುಳಿಗ ತಂಬಿಲ ನಡೆದು  9.30 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ , ಶ್ರೀ ದೇವರಿಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ  ಗಂ  6-30 ರಿಂದ ಜಿಲ್ಲೆಯ ಸುಪ್ರಸಿದ್ದ ಕಲಾವಿದರಿಂದ ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಸುಸಜ್ಜಿತ ಭವ್ಯ ರಂಗಸ್ಥಳದಲ್ಲಿ “ಹರಿಭಕ್ತ ಮಯೂರಧ್ವಜ ಸುಂದೋಪಸುಂದ”ಯಕ್ಷಗಾನ ಬಯಲಾಟ, ರಾತ್ರಿ ಗಂ 7-30ಕ್ಕೆ ಶ್ರೀ ದೇವರಿಗೆ ಪೂಜೆ ರಾತ್ರಿ ಗಂಟೆ 8-00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ಇಂದು  
ಮಾ.1 ರಂದು  ಸಂಜೆ  ಗಂ 7.30 ರಿಂದ ಶ್ರೀ ದೇವರಿಗೆ ಸಾಮೂಹಿಕ ಕಾರ್ತಿಕ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ ಗಂ 8 ರಿಂದ ಪಡುಮಲೆ ಆಸರೆ ಕಲಾವಿದರಿಂದ ಲಿಂಕ್ ಲಿಂಗಪ್ಪೆ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ. ಈ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ ತನು-ಮನ-ಧನಗಳಿಂದ ಸಹಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here